ಭಾರಿ ಅಗ್ನಿ ಅವಘಡ: ಹೊತ್ತಿ ಉರಿದ ಅಂಗಡಿಗಳು: ಮಾಲೀಕರಿಂದ ಕಣ್ಣೀರು..
05:29 PM May 20, 2024 IST
|
prashanth
ಕೊಪ್ಪಳ ,ಮೇ,2024 (www.justkannada.in): ಹಾರ್ಡ್ವೇರ್ ಅಂಗಡಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳದ ಬಸ್ ನಿಲ್ದಾಣದ ಎದುರುಗಡೆ ಹಾರ್ಡ್ ವೇರ್ ಶಾಪ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಹಾರ್ಡ್ ವೇರ್ ಶಾಪ್ ನ ಪಕ್ಕದಲ್ಲಿರುವ ಮತ್ತೊಂದು ಅಂಗಡಿಗೆ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಸುಮಾರು ನಾಲ್ಕರಿಂದ ಐದು ಅಂಗಡಿಗಳು ಕೂಡ ಈ ಒಂದು ಅವಘಡದಲ್ಲಿ ಬೆಂಕಿಗೆ ಆಹುತಿಯಾಗುವೆ ಎನ್ನಲಾಗಿದೆ.
ಅಂಗಡಿಯಲ್ಲಿದ್ದ ವಸ್ತುಗಳು ಸ್ಪೋಟಗೊಳ್ಳುತ್ತಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅಂಗಡಿಯಿಂದ ಅಂಗಡಿಗೆ ಬೆಂಕಿ ವ್ಯಾಪಿಸುತ್ತಿದ್ದು, ಹೊತ್ತಿ ಉರಿಯುತ್ತಿರುವ ಅಂಗಡಿ ನೋಡಿ ಮಾಲೀಕರು ಕಣ್ಣೀರು ಹಾಕಿದ್ದಾರೆ.
Key words: fire, accident, Stores, koppala
Next Article