For the best experience, open
https://m.justkannada.in
on your mobile browser.

ಗುಜರಾತ್  ನಲ್ಲಿ ಭೀಕರ ಅಗ್ನಿ ದುರಂತ ಕೇಸ್: ಮಾಲ್, ಗೇಮಿಂಗ್ ಝೋನ್​​ಗಳಲ್ಲಿ ಕಟ್ಟೆಚ್ಚರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ.

11:12 AM May 27, 2024 IST | prashanth
ಗುಜರಾತ್  ನಲ್ಲಿ ಭೀಕರ ಅಗ್ನಿ ದುರಂತ ಕೇಸ್  ಮಾಲ್  ಗೇಮಿಂಗ್ ಝೋನ್​​ಗಳಲ್ಲಿ ಕಟ್ಟೆಚ್ಚರಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಸೂಚನೆ

ಬೆಂಗಳೂರು, ಮೇ 27,2024 (www.justkannada.in):  ಗುಜರಾತ್​ ನ  ರಾಜ್​ಕೋಟ್​ ನ ಟಿಆರ್​ಪಿ ಗೇಮಿಂಗ್ ಝೋನ್​ ನಲ್ಲಿ ಏಕಾಏಕಿ ಬೆಂಕಿ  ಕಾಣಿಸಿಕೊಂಡು 30ಕ್ಕೈ ಜನ ಸಾವನ್ನಪ್ಪಿರುವ ಘಟನೆ ನಡೆದ ಬೆನ್ನಲ್ಲೆ ರಾಜ್ಯದಲ್ಲಿ ಮಾಲ್, ಗೇಮಿಂಗ್ ಝೋನ್​​ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ  ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

ಈ ಸಂಬಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಗೆ ಪತ್ರ ಬರೆದಿರುವ ಡಿಸಿಎಂ ಡಿಕೆ ಶಿವಕುಮಾರ್​, ಬೆಂಗಳೂರಿನಾದ್ಯಂತ ಶಾಪಿಂಗ್ ಮಾಲ್‌ ಗಳು, ಗೇಮಿಂಗ್ ಮತ್ತು ಸಾಹಸ ವಲಯಗಳಂತಹ ಹೆಚ್ಚಾಗಿ ಜನದಟ್ಟಣೆ ಇರುವ ಮನರಂಜನಾ ಸ್ಥಳಗಳಲ್ಲಿ ಅಹಿತಕರ ಬೆಂಕಿ ಅನಾಹುತಗಳನ್ನು ತಡೆಗಟ್ಟಲು ಸೂಕ್ತವಾದ ಸುರಕ್ಷತಾ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳನ್ನ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಗುಜರಾತ್‌ನ ರಾಜ್ ಕೋಟ್‌ನ ಮನರಂಜನಾ ಕೇಂದ್ರದಲ್ಲಿ (ಗೇಮ್ ರೋಝನ್) ಶನಿವಾರ ಸಂಜೆ ಸಂಭವಿಸಿದ ಅಗ್ನಿ ಅವಘಡ ಸಂಭವಿಸಿರುವ ವರದಿಯಾಗಿದ್ದು, ಇದು ಅತ್ಯಂತ ಕಳವಳಿಕಾರಿ ದುರ್ಘಟನೆ. ಈ ದುರಂತವು ಎಲ್ಲರಿಗೂ ಎಚ್ಚರಿಕೆಯ ಗಂಟೆ, ಹೀಗಾಗಿ ಬೆಂಗಳೂರಿನ ಹಲವು ಪ್ರತಿಷ್ಠಿತ ಮಾಲ್‌ಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ಗೇಮ್ ಝನ್ ಹಾಗೂ ಸಾಹಸ ಕ್ರೀಡೆಗಳನ್ನು ನಡೆಸಲು ಅನುಮತಿ ನೀಡಲಾಗಿದ್ದು, ಇಂತಹ ಮನರಂಜನಾ ಕೇಂದ್ರಗಳು / ಗೇಮ್ ಜೋನ್‌ಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವಹಿಸಬೇಕಿದೆ. ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಂದ ಪರಿಶೀಲಿಸುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.

Key words:  Fire,  D.K Shivakumar, high alert, gaming zones

Tags :

.