ಮೈಸೂರಿನಲ್ಲಿ ದೇಶದ ಮೊಟ್ಟ ಮೊದಲ ಪಿಸಿಬಿ ಮತ್ತು ಪೂರೈಕೆ ಸರಪಳಿ ಕ್ಲಸ್ಟರ್
06:20 PM Sep 19, 2024 IST | prashanth
ಮೈಸೂರು,ಸೆಪ್ಟಂಬರ್,19,2024 (www.justkannada.in): ದೇಶದ ಮೊಟ್ಟ ಮೊದಲ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಹಾಗೂ ಪೂರೈಕೆ ಸರಪಳಿ ಕ್ಲಸ್ಟರ್ ನಗರದಲ್ಲಿ ಸ್ಥಾಪನೆಯಾಗುತ್ತಿದ್ದು, ಇದು ಸ್ಥಾಪನೆ ಬಳಿಕ, ಮೈಸೂರು ನಿಜವಾದ ಅರ್ಥದಲ್ಲಿ ದೇಶದ ಸಿಲಿಕಾನ್ ನಗರವಾಗಲಿದೆ ಎಂದು ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಐಟಿ/ಬಿಟಿ ಮತ್ತುಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ.
ನಗರದಲ್ಲಿಇಂದು ದಿ ಮೈಸೂರು ಬಿಗ್ ಟೆಕ್ ಶೋ 2024 ನಡೆಯಿತು. ಈ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅನುಪಸ್ಥಿತಿಯಲ್ಲಿ ಅವರ ಭಾಷಣವನ್ನ ಓದಲಾಯಿತು.
ನಾವು ಮೈಸೂರು ಭಾಗದಲ್ಲಿ ವಿಶೇಷ ಪಿಸಿಬಿ ಕ್ಲಸ್ಟರ್ ಅನ್ನು ಸ್ಥಾಪಿಸಲು ಎದುರು ನೋಡುತಿದ್ದೇವೆ. ಇದು ಇಎಸ್ಡಿಎಂ ಮೌಲ್ಯ ಸರಪಳಿಯನ್ನು ಹೆಚ್ಚಿಸುತ್ತದೆ ಮತ್ತು ಕರ್ನಾಟಕವನ್ನು ಈ ಕ್ಷೇತ್ರದಲ್ಲಿ ದಿಗ್ಗಜ ರಾಜ್ಯವಾಗಿ ರೂಪಿಸಲಿದೆ ಎಂದು ಸಚಿವರು ಭಾಷಣದಲ್ಲಿ ತಿಳಿಸಿದ್ದಾರೆ.
Key words: first , PCB and supply chain cluster , Mysore