ಬೋನಿಗೆ ಬಿದ್ದ ಐದು ವರ್ಷದ ಗಂಡು ಹುಲಿ.
ಮೈಸೂರು,ಫೆಬ್ರವರಿ,15,2024(www.justkannada.in): ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಚಿಕ್ಕನಹಳ್ಳಿ ಅರಣ್ಯ ಬಳಿ ಐದು ವರ್ಷದ ಗಂಡು ಹುಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಮೈಸೂರು ತಾಲೂಕಿನ ಚಿಕ್ಕಕಾನ್ಯ ಬಳಿ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿತ್ತು. ಇದೀಗ ಐದು ವರ್ಷದ ಗಂಡು ಹುಲಿ ಸೆರೆಯಾಗಿದೆ. ಕಳೆದ ವಾರವಷ್ಟೆ, ಮೈಸೂರು ವಿಮಾನ ನಿಲ್ದಾಣದ ಬಳಿ ಅಪಘಾತದಲ್ಲಿ ಹುಲಿ ಸಾವನಪ್ಪಿತ್ತು. ಈ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ಹಲವು ಕಡೆಗಳಲ್ಲಿ ಬೋನು ಇರಿಸಲಾಗಿತ್ತು. ಇದೀಗ ಅರಣ್ಯ ಇಲಾಖೆ ಬೋನಿ ಹುಲಿ ಸೆರೆಯಾಗಿದೆ.
ಹುಲಿಯನ್ನ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಪರಿಶೀಲನೆ ಮಾಡಲಾಗಿದೆ. ಸಾಮಾನ್ಯವಾಗಿ ಹುಲಿಗಳು ಬೋನಿಗೆ ಬೀಳುವುದು ಅಪರೂಪದಲ್ಲೆ ಅಪರೂಪ ಪ್ರಕರಣ. ಸ್ಥಳಕ್ಕೆ ಮೈಸೂರು ವೃತ್ತದ ಸಿ.ಎಫ್ ಡಾ.ಮಾಲತಿಪ್ರಿಯಾ, ಡಿ.ಸಿ.ಎಫ್ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಲಿ ಆರೋಗ್ಯವಾಗಿರುವ ಹಿನ್ನೆಲೆ. ಹುಲಿಯ ವಯಸ್ಸು ಚಿಕ್ಕದಾಗಿದ್ದರಿಂದ, ಹುಲಿಯ ಚಲನವಲನ ಗಮನಿಸುವ ಸಲುವಾಗಿ ರೇಡಿಯೋ ಕಾಲರ್ ಅಳವಡಿಕೆ ಮಾಡಿ ಹುಲಿಯನ್ನ ಮತ್ತೆ ಕಾಡಿಗೆ ಬಿಡಲಾಗುತ್ತಿದೆ.
Key words: five-year-old – tiger- fell –cage-mysore