ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಕುರಿತು ಬೇಸರ ವ್ಯಕ್ತಪಡಿಸಿದ ಮಾಜಿ ಸಚಿವ ಸಿ.ಟಿ ರವಿ.
12:13 PM Jan 16, 2024 IST
|
prashanth
ಬೆಂಗಳೂರು,ಜನವರಿ,16,2024(www.justkannada.in): ಸಿಎಂ ಸಿದ್ದರಾಮಯ್ಯ ವಿರುದ್ದ ಏಕವಚನ ಪದ ಬಳಕೆ ಮಾಡಿ ಮಾತನಾಡಿದ್ದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಸ್ವಪಕ್ಷದವರೇ ಆದ ಮಾಜಿ ಸಚಿವ ಸಿ.ಟಿ ರವಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿ.ಟಿ ರವಿ, ಸಂಸದ ಅನಂತ್ ಕುಮಾರ್ ಹೆಗಡೆ ಮಾತುಗಳನ್ನು ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಹಿರಿಯರು ಮತ್ತು ಅವರ ಸ್ಥಾನಕ್ಕೆ ಗೌರವ ಕೊಡಬೇಕು. ಯಾರದೇ ಮನಸ್ಸಿಗೆ ಘಾಸಿಯಾಗುವಂತಹ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲ್ಲ. ರಾಜ್ಯದ ಮುಖ್ಯಮಂತ್ರಿ ಬಗ್ಗೆ ಏಕವಚನದಲ್ಲಿ ಮಾತನಾಡೋದು ತಪ್ಪು ಎಂದು ಹೇಳಿದ್ದಾರೆ.
ಅನಂತ್ ಕುಮಾರ್ ಹೆಗಡೆ ಅವರ ಕಾರ್ಯಶೈಲಿ ವಿಭಿನ್ನವಾಗಿರಬಹುದು. ನಾವು ಆಡುವ ಭಾಷೆ ಅಥವಾ ಮಾತು ಬೇರೆಯವರಿಗೆ ಘಾಸಿಯುಂಟು ಮಾಡಿದ್ರೆ ಸಹಿಸಿಕೊಳ್ಳಲು ಆಗಲ್ಲ. ಹಿರಿಯರಿಗೆ ಮತ್ತು ಅವರ ಸ್ಥಾನಕ್ಕೆ ಗೌರವ ಕೊಡಲೇಬೇಕು ಎಂದು ಸಿ.ಟಿ ರವಿ ತಿಳಿಸಿದ್ದಾರೆ.
Key words: Former minister -CT Ravi displeasure -MP Ananth Kumar Hegde's -statement.
Next Article