For the best experience, open
https://m.justkannada.in
on your mobile browser.

ಮೋದಿ ಹೊಗಳುವ ಮೂಲಕ ಹೆಚ್.ಡಿ ದೇವಗೌಡರು ಚಮಚಗಿರಿ ಮಾಡುತ್ತಿದ್ದಾರೆ-ಹೆಚ್.ವಿಶ್ವನಾಥ್ ಲೇವಡಿ.

01:27 PM Feb 19, 2024 IST | prashanth
ಮೋದಿ ಹೊಗಳುವ ಮೂಲಕ ಹೆಚ್ ಡಿ ದೇವಗೌಡರು ಚಮಚಗಿರಿ ಮಾಡುತ್ತಿದ್ದಾರೆ ಹೆಚ್ ವಿಶ್ವನಾಥ್ ಲೇವಡಿ

ಮೈಸೂರು,ಫೆಬ್ರವರಿ,19,2024(www.justkannada.in): ಪ್ರಧಾನಿ ನರೇಂದ್ರ ಮೋದಿಯನ್ನ ಹೊಗಳುವ ಮೂಲಕ ಮಾಜಿ ಪ್ರಧಾನಿ ಹೆಚ್. ಡಿ ದೇವಗೌಡರು ಚಮಚಗಿರಿ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಲೇವಡಿ ಮಾಡಿದರು.

ಮೈಸೂರಿನಲ್ಲಿ  ಇಂದು ಮಾತನಾಡಿದ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ನೆಹರು, ಇಂದಿರಾ ಗಾಂಧಿಗಿಂತ ಮೋದಿ ಸಾಧನೆ ಮಾಡಿದ್ದಾರಾ? ನೆಹರು ಇಂದಿರಾಗಾಂಧಿ ಬಡತನ ನಿರ್ಮೂಲನೆ ಮಾಡಿ ದೇಶವನ್ನ ಅಭಿವೃದ್ಧಿಯತ್ತ ಕೊಂಡೋಯ್ದಿದ್ದಾರೆ. ಆದರೆ ದೇವಗೌಡರು ಮೋದಿಯನ್ನ ಕೊಂಡಾಡುತ್ತಿರುವುದು ವಿಪರ್ಯಾಸ. ದೇವೇಗೌಡರಂತಹ ಹಿರಿಯ ನಾಯಕರಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್.ಡಿ ದೇವೇಗೌಡರು ಜಾತ್ಯತೀತ ಪದಕ್ಕೂ ತಿಲಾಂಜಲಿ ಇಟ್ಟಿದ್ದಾರೆ. ಮೋದಿಯಂತಹ ನಾಯಕನನ್ನ ಕಂಡಿರಲಿಲ್ಲ ಎಂದು ಚಮಚಗಿರಿ ಮಾಡುತ್ತಿದ್ದಾರೆ ಎಂದು ಹೆಚ್. ವಿಶ್ವನಾಥ್ ಹರಿಹಾಯ್ದರು.

Key words: Former PM-H D. Dev Gowda - praising-PM-Modi -MLC-H. Vishwanath

Tags :

.