For the best experience, open
https://m.justkannada.in
on your mobile browser.

ಅನಿಲ ಸೋರಿಕೆಯಿಂದ ನಾಲ್ವರು  ಸಾವು ಕೇಸ್: ಘಟನೆ ಬಗ್ಗೆ ವಿವರ ನೀಡಿದ ಪೊಲೀಸ್ ಆಯುಕ್ತ ರಮೇಶ್ ಬಾನೋತ್

01:53 PM May 22, 2024 IST | prashanth
ಅನಿಲ ಸೋರಿಕೆಯಿಂದ ನಾಲ್ವರು  ಸಾವು ಕೇಸ್  ಘಟನೆ ಬಗ್ಗೆ ವಿವರ ನೀಡಿದ ಪೊಲೀಸ್ ಆಯುಕ್ತ ರಮೇಶ್ ಬಾನೋತ್

ಮೈಸೂರು ,ಮೇ,22,2024 (www.justkannada.in): ಮೈಸೂರಿನ ಯರಗನಹಳ್ಳಿಯಲ್ಲಿ ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ವಿವರ ನೀಡಿದ್ದಾರೆ.

ಈ ಕುರಿತು ಮಾತನಾಡಿದ ರಮೇಶ್ ಬಾನೋತ್, ಮೈಸೂರಿನ ಯರಗನಹಳ್ಳಿಯಲ್ಲಿ ಘಟನೆ ನಡೆದಿದ್ದು, ಕುಮಾರಸ್ವಾಮಿ (45) ಮಂಜುಳಾ (39) ಅರ್ಚನಾ (19) ಸ್ವಾತಿ (17) ಸಾವನ್ನಪ್ಪಿದ್ದಾರೆ. ಮೃತಪಟ್ಟ ನಾಲ್ವರು ಚಿಕ್ಕಮಗಳೂರು ಜಿಲ್ಲೆಯ ಸಖರಾಯನಪಟ್ಟಣ ಗ್ರಾಮದವರು. ಮೈಸೂರಿನಲ್ಲಿ ಸುಮಾರು ಮೂವತ್ತು ವರ್ಷಗಳಿಂದ ವಾಸವಿದ್ದಾರೆ. ಇಲ್ಲೆ ಸ್ವಂತ ಮನೆಯಲ್ಲಿ ವಾಸವಿದ್ದರು. ಇಸ್ತ್ರೀ ಕೆಲಸ ಮಾಡಿಕೊಂಡು ಕುಮಾರಸ್ವಾಮಿ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದರು ಎಂದು ಮಾಹಿತಿ ನೀಡಿದರು.

ಅವರು ಅವರ ಸಂಬಂಧಿ ಮದುವೆಗೆ ಚಿಕ್ಕಮಗಳೂರಿಗೆ ಹೋಗಿ ಬಂದಿದ್ದರು. ಸೋಮವಾರ ಸಂಜೆ ವಾಪಸ್ ಬಂದಿದ್ದಾರೆ. ನೈಟ್ ಮನೆಯಲ್ಲಿ ಮಲಗಿದ್ದಾರೆ. ಅವರ ಸಂಬಂಧಿಗಳು ಕಾಲ್ ಮಾಡಿರ್ತಾರೆ, ಕಾಲ್ ರಿಸಿವ್ ಆಗಿರ್ಲಿಲ್ಲ. ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದವರು ಬುಧವಾರ ಬೆಳಗಿನ ಜಾವಾ ಆದರೂ ಎದ್ದಿರಲಿಲ್ಲ. ಇಇಂದು ಮನೆಯ ಅಕ್ಕಪಕ್ಕದವರಿಗೆ ಕುಮಾರಸ್ವಾಮಿ ಇದ್ದಾರ ಎಂಬುದರ ಬಗ್ಗೆ ಹೇಳಿದ್ದಾರೆ. ಆಗ ಅಕ್ಕಪಕ್ಕದವರಿಗೆ ಮನೆಯಲ್ಲಿ ಇದ್ದಾರಾ ಎಂಬುದರ ಬಗ್ಗೆ ನೋಡಲು ಹೇಳಿದ್ದಾರೆ‌. ಸ್ಥಳೀಯರು ಬಾಗಿಲು ಬಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ತಕ್ಷಣ ನಮಗೆ ಮಾಹಿತಿ ನೀಡಿದರು. ತಕ್ಷಣ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದವು.

ಅದು 10*20 ಅಡಿ ಇರುವ ಚಿಕ್ಕ ಮನೆ. ಮನೆಯ ಹಿಂಭಾಗ ಹಾಗೂ ಮುಂಭಾಗ ಮಾತ್ರ ಕಿಟಕಿ ವ್ಯವಸ್ಥೆ ಇರೋದು. ಬಟ್ಟೆ ಇಸ್ರ್ತಿ ಪೆಟ್ಟಿಗೆಗೆ ಗ್ಯಾಸ್ ಬಳಸುತ್ತಿದ್ರು. ಸೋಮವಾರ ರಾತ್ರಿ ಮನೆಗೆ ಬಂದವರು ಎರಡು ಕಿಟಕಿ ಬಂದ್ ಮಾಡಿಕೊಂಡು ಮಲಗಿದ್ದರು. ರೂಂನಲ್ಲಿ ಗಂಡ ಹೆಂಡತಿ ಹಾಲ್ ನಲ್ಲಿ ಮಕ್ಕಳಿಬ್ಬರು ಮಲಗಿದ್ದರು. ಈ ವೇಳೆ ಸೋರಿಕೆ ಅನಿಲದಿಂದ ಎಲ್ಲರೂ ಮೃತಪಟ್ಟಿದ್ದಾರೆ. ಎಲ್ಲರ ಕಿವಿ ಮತ್ತು ಮೂಗು ಬಾಯಲ್ಲಿ ರಕ್ತ ಸೋರಿಕೆಯಾಗಿತ್ತು. ಗ್ಯಾಸ್ ಸ್ಮೆಲ್ ಬರುತ್ತಿತ್ತು. ಮನೆಯ ಹಿಂದೆ ವಿಂಡೋ ತೆಗೆದು ನೋಡಿದಾಗಲೂ ಸ್ಮೆಲ್ ಬರುತ್ತಿತ್ತು.

ಫೈರ್ ಡಿಪಾರ್ಟ್ಮೆಂಟ್, ಎಫ್ ಎಸ್ ಐಲ್ ಬಂದು ಡೋರ್ ಒಪನ್ ಮಾಡಿದರು. ಆಗ ಗ್ಯಾಸ್ ಸ್ಮೆಲ್ ಬರ್ತಿತ್ತು. ಆಗ ಎಲ್ಲಾ ಡೋರ್ ಒಪನ್ ಮಾಡಿ ನಂತರ ಒಳ ಹೋಗಿ ನೋಡಿದವು . ಮನೆಯಲ್ಲಿ ಮೂರು ಸಿಲಿಂಡರ್ ಇದ್ದು, ಗ್ಯಾಸ್‌ ಬಳಸಿ ಐರನ್ ಮಾಡುತ್ತಿದ್ದರು. ಹೀಗಾಗಿ ಮೂರು ಸಿಲಿಂಡರ್ ಇತ್ತು. ಮೇಲ್ನೋಟಕ್ಕೆ ಒಂದು ಸಿಲಿಂಡರ್ ಮಾತ್ರ ಲೀಕ್ ಆಗಿದೆ. ಉಳಿದ ಎರಡು ಸಿಲಿಂಡರ್ ಖಾಲಿ ಇತ್ತು ಎಂದು ರಮೇಶ್ ಬಾನೋತ್ ತಿಳಿಸಿದರು.

Key words: Four died, gas leak, Police Commissioner, Ramesh Banoth

Tags :

.