For the best experience, open
https://m.justkannada.in
on your mobile browser.

ಮೈಸೂರು ದಸರಾಗೆ ಬಂಡೀಪುರದಿಂದ ನಾಲ್ಕು ಆನೆಗಳು ಆಯ್ಕೆ

02:45 PM Jul 22, 2024 IST | prashanth
ಮೈಸೂರು ದಸರಾಗೆ ಬಂಡೀಪುರದಿಂದ ನಾಲ್ಕು ಆನೆಗಳು ಆಯ್ಕೆ

ಮೈಸೂರು,ಜುಲೈ,22,2024 (www.justkannada.in): ನಾಡಹಬ್ಬ ಮೈಸೂರು ದಸರಾಗೆ ಕೆಲವೆ ತಿಂಗಳು ಬಾಕಿ ಇದ್ದು ಈ ಹಿನ್ನಲೆಯಲ್ಲಿ  ಜಂಬೂ ಸವಾರಿಗೆ ಭಾಗವಹಿಸುವ ಆನೆಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಇದೀಗ ಬಂಡೀಪುರದಿಂದ ನಾಲ್ಕು ಆನೆಗಳನ್ನ ಆಯ್ಕೆ ಮಾಡಲಾಗಿದೆ.

ವನ್ಯಜೀವಿ ವಿಭಾಗದ ಡಿಸಿಎಫ್‌  ಬಿ ಎಂ ಶರಣಬಸಪ್ಪ ನೇತೃತ್ವದ ಅರಣ್ಯಾಧಿಕಾರಿಗಳಿಂದ ಆನೆಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಪಶು ವೈದ್ಯರೊಂದಿಗೆ ಬಂಡೀಪುರ ರಾಂಪುರ ಆನೆ ಶಿಬಿರದ ನಾಲ್ಕು ಆನೆಗಳನ್ನು ಪರಿಶೀಲನೆ ಮಾಡಲಾಗಿದೆ.

ಅಕ್ಟೋಬರ್‌ 12ರಂದು ವಿಜಯದಶಮಿ ನಡೆಯಲಿದ್ದು, ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳಿಗೆ  ಎರಡು ತಿಂಗಳ ಮೊದಲೇ ತರಬೇತಿ ನೀಡಬೇಕಾಗಿರುವ  ಕಾರಣ  ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದ ರೋಹಿತ (22) ಗಂಡಾನೆ ಒಂದು ಬಾರಿ ದಸರಾದಲ್ಲಿ ಭಾಗವಹಿಸಿದೆ. ಪಾರ್ಥಸಾರಥಿ (18) ಗಂಡಾನೆ ಒಂದು ಬಾರಿ ದಸಾರದಲ್ಲಿ ಭಾಗವಹಿಸಿದೆ. ಹಿರಣ್ಯಾ (47) ಒಂದು ಬಾರಿ ದಸರಾದಲ್ಲಿ ಭಾಗವಹಿಸಿದೆ. ಲಕ್ಷ್ಮಿ(22) ಎಂಬ ಆನೆ ಮೂರು ಬಾರಿ ದಸರಾದಲ್ಲಿ ಭಾಗವಹಿಸಿದೆ. ಮೊದಲ ಹಂತದಲ್ಲಿ ರೋಹಿತ, ಲಕ್ಷ್ಮಿ ಆನೆಗಳು ಮೈಸೂರಿಗೆ ಪ್ರಯಾಣ ಬೆಳೆಸಲಿವೆ. ಎರಡನೇ ಹಂತದಲ್ಲಿ ಹಿರಣ್ಯ ಮತ್ತು ಪಾರ್ಥಸಾರಥಿ ಪ್ರಯಾಣ ಬೆಳಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Four elephants, Bandipur, selected, Mysore Dasara

Tags :

.