For the best experience, open
https://m.justkannada.in
on your mobile browser.

ಬಡ ಮಕ್ಕಳ ಶಿಕ್ಷಣಕ್ಕೆ ನೆರವು: ಶಾಲಾ ಮಕ್ಕಳಿಗೆ ಯಶ್ಟೆಲ್ ಮಂಜುನಾಥ್ ರಿಂದ ಉಚಿತ ಬ್ಯಾಗ್ ವಿತರಣೆ.

04:15 PM Aug 15, 2024 IST | prashanth
ಬಡ ಮಕ್ಕಳ ಶಿಕ್ಷಣಕ್ಕೆ ನೆರವು  ಶಾಲಾ ಮಕ್ಕಳಿಗೆ ಯಶ್ಟೆಲ್ ಮಂಜುನಾಥ್ ರಿಂದ ಉಚಿತ ಬ್ಯಾಗ್ ವಿತರಣೆ

ಮೈಸೂರು,ಆಗಸ್ಟ್,16,2024 (www.justkannada.in): 78 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಯು ಡಿಜಿಟಲ್ ಕೇಬಲ್ ನೆಟ್ವರ್ಕ್, ಯಶ್ ಟೆಲ್ ಇಂಟರ್ನೆಟ್ ಮತ್ತು ಯಶ್ ಟೆಲ್ ವಾಹಿನಿಯ ಮುಖ್ಯಸ್ಥ ಮಂಜುನಾಥ್ ಮತ್ತು ಕುಟುಂಬಸ್ಥರ‌ ವತಿಯಿಂದ ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಮಾಡಲಾಯಿತು.

ವಿಜಯನಗರದಲ್ಲಿರುವ ಡಿ.ಸಂಜೀವಯ್ಯ ಸ್ಮಾರಕ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 150ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ  ಯಶ್ ಟೆಲ್ ಮಂಜುನಾಥ್ ಮತ್ತು ಕುಟುಂಬಸ್ತರು ಬ್ಯಾಗ್ ವಿತರಣೆ ಮಾಡಿದರು.

ಯು. ಡಿಜಿಟಲ್ ಮತ್ತು ಯಶ್ಟೆಲ್ ಇಂಟರ್ನೆಟ್ ಸಂಸ್ಥೆಯ ಸಿ. ಜಯಲಕ್ಷ್ಮೀ, ಎಚ್.ಆರ್ ಸುಮ, ಸಿಇಒ ಅನಿಲ್, ಶಿಕ್ಷಕರು ಮತ್ತು ಮಕ್ಕಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು. ಈ ವೇಳೆ ಶಾಲಾ ಮಕ್ಕಳಿಗೆ ಶಿಸ್ತಿನ ಪಾಠ ಹೇಳಿದ ಎಚ್.ಆರ್ ಸುಮ ಅವರು,  ಮಕ್ಕಳು ತಮ್ಮ ಗುರಿಯತ್ತ ಸಾಗಬೇಕಾದರೆ ಶಿಸ್ತು ಬಹಳ ಮುಖ್ಯ, ಶಿಸ್ತನ್ನು ಮೈಗೂಡಿಸಿಕೊಂಡು ಚೆನ್ನಾಗಿ ಓದಿ ವಿದ್ಯಾವಂತರಾಗಿ ದೊಡ್ಡ ದೊಡ್ಡ ಕೆಲಸಕ್ಕೆ ಸೇರಬೇಕು.  ನೀವು ಬಡವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಬಳಿಕ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ, ಉದ್ಯಮಿ ಮಂಜುನಾಥ್,  ನಿಮ್ಮನ್ನೆಲ್ಲ ನೋಡಿದರೆ ನಮ್ಮ ಬಾಲ್ಯದ ನೆನಪಾಗುತ್ತದೆ. ಜೀವನದಲ್ಲಿ ಎಲ್ಲರೂ ಕಷ್ಟ ಓದಿ ಮುಂದೆ ಬರಬೇಕು. ನೀವು ದೇಶದ ಉತ್ತಮ ಪ್ರಜೆಯಾಗಿ ದೇಶಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು. ನಿಮ್ಮ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳು, ಮತ್ತು ವಿದ್ಯಾರ್ಥಿನಿಲಯಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಸಿದ್ದನಿದ್ದೇನೆ. ಏನೇ ಸಮಸ್ಯೆ ಇದ್ದರೂ ನಮಗೆ ತಿಳಿಸಿ ಎಂದು ತಮ್ಮ ಔದಾರ್ಯವನ್ನ ಮೆರೆದರು.

ಸ್ವಾತಂತ್ರ್ಯ ದಿನಾಚರಣೆ ಬಳಿಕ ಶಾಲೆಗೆ ಆಗಮಿಸಿ ಶಾಲಾ ಶಿಕ್ಷಕರ ಸಮ್ಮುಖದಲ್ಲಿ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಿದ್ದು ಈ ಮೂಲಕ ಉದ್ಯಮಿ ಮಂಜುನಾಥ್ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಕೆಲಸಕ್ಕೆ ಮುಂದಾಗಿದ್ದಾರೆ.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ  ಸೇರಿದಂತೆ ಶಿಕ್ಷಕ ವರ್ಗ ನೂರಾರು ಮಕ್ಕಳು ಭಾಗಿಯಾಗಿದ್ದರು.

Key words: Free bag, distribution, school children, Yashtel Manjunath

Tags :

.