ಚಾಮುಂಡಿ ಬೆಟ್ಟ ಅನ್ನದಾಸೋಹ ಭವನಕ್ಕೆ ವಿ-ಗಾರ್ಡ್ ಕಂಪನಿಯಿಂದ ಉಚಿತ ಶುದ್ಧ ನೀರಿನ ಘಟಕ ಸಮರ್ಪಣೆ
ಮೈಸೂರು,ಜುಲೈ,25,2024 (www.justkannada.in): ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮತ್ತು ಪ್ರವಾಸಿಗರ ಅನೂಕಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನ ವಿ-ಗಾರ್ಡ್ ಕಂಪನಿ ವತಿಯಿಂದ ಅನ್ನದಾಸೋಹ ಭವನಕ್ಕೆ ಉಚಿತವಾಗಿ ಸ್ಥಾಪಿಸಿ ಇಂದು ಹಸ್ತಾಂತರಿಸಲಾಯಿತು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ.ದೇವೆಗೌಡ ಅವರು ಚಾಮುಂಡಿ ಬೆಟ್ಟಕ್ಕೆ ಮೂಲಭೂತ ಸೌಲಭ್ಯಗಳನ್ನ ಶಾಶ್ವತವಾಗಿ ಒದಗಿಸಲು ಸಿ.ಎಸ್. ಆರ್ ವಲಯ ಖಾಸಗಿ ಕಂಪನಿಗಳಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ವಿ-ಗಾರ್ಡ್ ಕಂಪನಿ ಚಾಮುಂಡಿಬೆಟ್ಟಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತಾಧಿಗಳಿಗೆ ಪ್ರತಿದಿನ 50ಸಾವಿರ ಮಂದಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಾಮರ್ಥ್ಯವುಳ್ಳ ವಿ-ಗಾರ್ಡ್ RO plant ಶುದ್ಧ ಕುಡಿಯುವ ನೀರಿನ ಘಟಕವನ್ನ ವಿ- ಗಾರ್ಡ್ ಕಂಪನಿಯ ಉಪಾಧ್ಯಕ್ಷರ ಸೂರ್ಯಪ್ರಸಾದ್ ವಿಜೆ, ಶಾಖೆ ವ್ಯವಸ್ಥಾಪಕ ಹರ್ಷೇಂದ್ರ ಪ್ರಸಾದ್ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಶೇಖರ ದೀಕ್ಷತ್ ರವರು ಕುಡಿಯುವ ನೀರಿನ ಘಟಕ ಯಂತ್ರಕ್ಕೆ ಪೂಜೆ ಸಲ್ಲಿಸಿದರು.
ಈ ವೇಳೆ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು, ವಿ- ಗಾರ್ಡ್ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ ,ತನ್ವಿ ಟ್ರೇಡಿಂಗ್ ಕಾರ್ಪೋ ದೀಪಕ್ ಆರ್ ಹೆಬ್ಬಾಳ್, ಚಮನ್, ಪುರುಷೋತ್ತಮ್, ಅರಣ್, ಉಪಸ್ಥಿತರಿದ್ದರು.
Key words: Free Clean Water Unit, V-Guard Company, Chamundi hills