For the best experience, open
https://m.justkannada.in
on your mobile browser.

‘ಫ್ರೆಂಡ್ಸ್’ ಖ್ಯಾತಿಯ ನಟ ಮ್ಯಾಥ್ಯೂ ಪೆರ್ರಿ ನಿಧನ

11:26 AM Oct 29, 2023 IST | thinkbigh
‘ಫ್ರೆಂಡ್ಸ್’ ಖ್ಯಾತಿಯ ನಟ ಮ್ಯಾಥ್ಯೂ ಪೆರ್ರಿ ನಿಧನ

ಲಾಸ್ ಏಂಜಲೀಸ್, ಅಕ್ಟೋಬರ್ 29, 2023 (www.justkannada.in): ‘ಫ್ರೆಂಡ್ಸ್’ಖ್ಯಾತಿಯಮ್ಯಾಥ್ಯೂಪೆರ್ರಿಇಂದು ನಿಧನರಾಗಿದ್ದಾರೆ.

ಲಾಸ್ ವೇಗಾಸ್ ನ ತಮ್ಮ ಮನೆಯಲ್ಲಿ 54 ವರ್ಷದ ಖ್ಯಾತ ನಟ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೆ ಕಾರಣವನ್ನು ಉಲ್ಲೇಖಿಸಿಲ್ಲ. ಯಾವುದೇ ಅಕ್ರಮದ ಕುರುಹು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆನಡಾದ ಪ್ರಧಾನಿ ಪಿಯರೆ ಟ್ರುಡೊ ಅವರ ಪತ್ರಿಕಾ ಕಾರ್ಯದರ್ಶಿಯಾಗಿದ್ದ ನಟ ಜಾನ್ ಬೆನೆಟ್ ಪೆರ್ರಿ ಮತ್ತು ಸುಝೇನ್ ಮೇರಿ ಲ್ಯಾಂಗ್ಫೋರ್ಡ್ ಅವರ ಮಗನಾದ ಪೆರ್ರಿ 1969 ರಲ್ಲಿ ಜನಿಸಿದ್ದರು.

ಪೆರ್ರಿ 1 ವರ್ಷದವರಿದ್ದಾಗ ಅವರ ಪೋಷಕರು ಬೇರ್ಪಟ್ಟ ನಂತರ ಮಾಂಟ್ರಿಯಲ್ ಮತ್ತು ಲಾಸ್ ಏಂಜಲೀಸ್ ನಡುವೆ ಬೆಳೆದರು. ಅವರ ‘ಫ್ರೆಂಡ್ಸ್’ ಸರಣಿ ಸಾಕಷ್ಟು ಖ್ಯಾತಿ ಗಳಿಸಿತ್ತು.

Tags :

.