For the best experience, open
https://m.justkannada.in
on your mobile browser.

ತುಪ್ಪದ ದೋಸೆ ಮಹದೇವಪ್ಪ ಇನ್ನು ನೆನಪು ಮಾತ್ರ !

01:44 PM May 28, 2024 IST | mahesh
ತುಪ್ಪದ ದೋಸೆ ಮಹದೇವಪ್ಪ ಇನ್ನು ನೆನಪು ಮಾತ್ರ
ತುಪ್ಪದ ದೋಸೆ ಹೋಟೆಲ್ ಪರಂಪರೆಯನ್ಮು ಅವರ ಮಗ ಮಹೇಶ್ ಮುಂದುವರಿಸಿದ್ದಾರೆ.

ಮೈಸೂರು, ಮೇ.28,2024 (www.justkannada.in news) ಸಾಂಸ್ಕೃತಿಕ ನಗರಿ ಮೈಸೂರು ಕೆಲ ಸಾಂಪ್ರದಾಯಿಕ ತಿನಿಸುಗಳಿಗೂ ಹೆಸರುವಾಸಿ. ಬಾಯಲ್ಲಿ ನೀರೂರಿಸುವ ವಿಶೇಷವಾದ ಹೈಟೆಕ್‌ ಹೋಟೆಲ್‌ ಗಳ ನಡುವೆಯೂ ಹಳೇ ಪುರಾತನ ಶೈಲಿಯ ಹೋಟೆಲ್‌ ಗಳು ಸಹ ಈ ಡಿಜಿಟಲ್‌ ಯುಗದಲ್ಲಿ ಅಷ್ಟೆ ಕ್ರೇಜ್‌ ಹುಟ್ಟು ಹಾಕಿವೆ. ಈ ಪೈಕಿ ಮೈಸೂರಿನ ತುಪ್ಪದ ಹೋಟೆಲ್‌ ಸಹ ಒಂದು.

ಈ ವಿಷಯ ಈಗ್ಯಾಕೆ ಅಂದ್ರೆ, ಇಂಥ ಹೋಟೆಲ್‌ ನ ಮೂಲ ವ್ಯಕ್ತಿ ಈಗ ಜಸ್ಟ್‌ ನೆನಪು ಮಾತ್ರ. ಹೌದು ತುಪ್ಪದ ಹೋಟೆಲ್‌ ನ ಮಹಾದೇವಪ್ಪ ಇನ್ನಿಲ್ಲ. ಅಗ್ರಹಾರದ 101 ಗಣಪತಿ ದೇಗುಲದ ಬಳಿಯಿರುವ ತುಪ್ಪದ ದೋಸೆ ಹೋಟೆಲ್ ಹಾಗೂ ಅದರ ಮಾಲೀಕರು.

ಮೈಸೂರಿನ ಅಗ್ರಹಾರದ ತುಪ್ಪದ ದೋಸೆ ನಿಜಕ್ಕೂ ತನ್ನದೆ ಆದ ಫ್ಯಾನ್‌ ಬೇಸ್‌ ಹೊಂದಿದ್ದ ಚಿಕ್ಕ ಹೋಟೆಲ್.‌ ಈ ಹೋಟೆಲ್‌ ನಲ್ಲಿ ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಎಲ್ಲರೂ ಇದರ ರುಚಿಗೆ ಮಾರು ಹೋದವರೆ.

ಈ ಹೋಟೆಲ್‌ನ ಮೂಲ ಪುರುಷ ಮಹದೇವಪ್ಪ‌. ತುಪ್ಪದ ದೋಸೆ ಹೋಟೆಲ್ ಮಾಲೀಕ ಮಹದೇವಪ್ಪನವರು ಈಗ ನೆನಪು ಮಾತ್ರ. ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. 90 ವರ್ಷದ ಹಿರಿಯ ಜೀವ ಕಾಯಕ ಮಾಡುತ್ತಲೆ ವಿಧಿವಶರಾಗಿದ್ದಾರೆ. ಮಹದೇವಪ್ಪನವರು ಸ್ವಾತಂತ್ರ್ಯ ಪೂರ್ವದಲ್ಲಿ ಮಹದೇವಪ್ಪ ತಂದೆ ಈ ಹೋಟೆಲ್ ಆರಂಭಿಸಿದ್ದರು. ನಂತರ ಆ ಹೋಟೆಲ್‌ನ್ನು ಮುಂದುವರಿಸಿದ್ದು ಮಹದೇವಪ್ಪನವರು. ಅತ್ಯಂತ ಕಿರಿದಾದ ಹೋಟೆಲ್‌ನಲ್ಲಿ ದೋಸೆ, ಇಡ್ಲಿ, ಕಾಫಿ, ಕಷಾಯ ಬಿಟ್ಟರೆ ಬೇರೆ ಏನು ಸಿಗುವುದಿಲ್ಲ. ಅದರ ಜೊತೆಗೆ ಇಲ್ಲಿ ಕುಳಿತುಕೊಳ್ಳಲು ಜಾಗವೂ ಸಿಗುವುದಿಲ್ಲ ಅಷ್ಟರ ಮಟ್ಟಿಗೆ ಜನ ತುಪ್ಪದ ದೋಸೆಗೆ ಮುಗಿ ಬಿದ್ದಿರುತ್ತಾರೆ.

ಮೈಸೂರಿನ ವಿಶೇಷತೆ ಅಂದ್ರೆ, ಮೈಸೂರಿಗರು ಯಾವುದೇ ಪರಂಪರೆ ನಾಶವಾಗಲು ಬಿಟ್ಟಿಲ್ಲ. ಬಹುತೇಕ ಮೈಸೂರಿನ ಪರಂಪರೆಯನ್ನು ಅವರ ಮಕ್ಕಳು ಸಂಬಂಧಿಕರು ಮುಂದುವರಿಸಿದ್ದಾರೆ. ಅದರಂತೆ ತುಪ್ಪದ ದೋಸೆ ಹೋಟೆಲ್ ಪರಂಪರೆಯನ್ಮು ಅವರ ಮಗ ಮಹೇಶ್ ಮುಂದುವರಿಸಿದ್ದಾರೆ. 11ನೇ ದಿನದ ಕಾರ್ಯದ ನಂತರ ತುಪ್ಪದ ದೋಸೆ ಹೋಟೆಲ್ ಮತ್ತೆ ಆರಂಭವಾಗಲಿದೆ.

  • ರಾಮ್, ಮೈಸೂರು

key words: Ghee dosa, Mahadevappa, Mysore, just a memory.

summary:

The cultural city of Mysore is also known for some traditional delicacies. Apart from the mouth-watering high-tech hotels, the old-fashioned hotels have also created an equally craze in this digital age. One of them is the Thuppada Hotel in Mysore.

Mahadevappa of Thuppada Hotel is no more. The ghee dosa hotel and its owners are located near the 101 Ganapati temple in Agrahara. The ghee dosa of Mysore Agrahara is indeed a small hotel with its own fan base. From the common man to the celebrities, everyone in this hotel is fascinated by the taste of it.

Tags :

.