ಗೋ ಬ್ಯಾಕ್ ಅಭಿಯಾನ: ಏನೇ ಮಾಡಿದ್ರೂ ತಲೆಕೆಡಿಸಿಕೊಳ್ಳಲ್ಲ – ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ.
ಚಿಕ್ಕಮಗಳೂರು,ಫೆಬ್ರವರಿ,24,2024(www.justkannada.in): ತಮ್ಮ ವಿರುದ್ದ ಗೋಬ್ಯಾಕ್ ಅಭಿಯಾನ ಮಾಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಏನೇ ಅಭಿಯಾನ ಮಾಡಿದರೂ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, 1 ರೂ. ಗುತ್ತಿಗೆ ಹಣ ಪಡೆಯದೇ ಕೆಲಸ ಮಾಡಿದ್ದೇನೆ. ಯಾವ ಗುತ್ತಿಗೆದಾರರ ಜತೆ ಚಹಾ ಕೂಡ ಸೇವಿಸಿಲ್ಲ. ಗುತ್ತಿಗೆದಾರರ ಮುಖ ನೋಡದೇ ಕೆಲಸ ಮಾಡಿದ್ದೇನೆ ಕೇಂದ್ರದ ಯೋಜನೆ ಜನರಿಗೆ ತಲುಪಿಸಲು ಶ್ರಮಿಸಿದ್ದೇನೆ ಎಂದರು.
ಮೋದಿಗೆ ಒಳ್ಳೆ ಹೆಸರು ಬರಬೇಕೆಂದು ಕೆಲಸ ಮಾಡಿದ್ದೇನೆ. ಸಾಮಾನ್ಯ ಕಾರ್ಯಕರ್ತ ಸಹ ಟಿಕೆಟ್ ಕೇಳಬಹದು. ಸಾಮಾನ್ಯ ಕಾರ್ಯಕರ್ತನಿಗೂ ಆ ಅಧಿಕಾರ ಇದೆ. ನಾವು ಸರ್ವಾಧಿಕಾರದ ಅಡಿಯಲ್ಲಿ ಇಲ್ಲ. ಪರ ವಿರೋಧ ಮಾತನಾಡಿದರೂ ತಲೆಕೆಡಿಸಿಕೊಳ್ಳಲ್ಲ. ಕಳೆದ ಚುನಾವಣೆಯಲ್ಲೂ ಇಂಥ ಅಭಿಯಾನ ಮಾಡಿದರು ಎಂಧದು ಶೋಭಾ ಕರಂದ್ಲಾಜೆ ತಿಳಿಸಿದರು.
Key words: Go Back –Campaign- No matter - Union Minister -Shobha Karandhlaje