For the best experience, open
https://m.justkannada.in
on your mobile browser.

ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಗುಡ್ ನ್ಯೂಸ್: ಎಲ್ಲಾ ಕೇಸ್ ಗಳು ಖುಲಾಸೆ.

10:59 AM Dec 30, 2023 IST | prashanth
ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಗುಡ್ ನ್ಯೂಸ್  ಎಲ್ಲಾ ಕೇಸ್ ಗಳು ಖುಲಾಸೆ

ಬೆಂಗಳೂರು, ಡಿಸೆಂಬರ್​ 30,2023(www.justkannada.in):  ಬಿಎಂಟಿಸಿಯು ತನ್ನ ಚಾಲಕ ಮತ್ತು ನಿರ್ವಾಹಕರಿಗೆ ಸಿಹಿಸುದ್ದಿ ನೀಡಿದ್ದು, ಬಿಎಂಟಿಸಿಯ ಚಾಲಕರ ಮತ್ತು ನಿರ್ವಾಹಕರ ಕೇಸ್​ ಗಳು ಖುಲಾಸೆ ಮಾಡಲಾಗಿದೆ.

ಈ ಕುರಿತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಆದೇಶ ಹೊರಡಿಸಿದ್ದು,  ಇದು ಇಂದಿನಿಂದಲೇ ಜಾರಿಯಾಗಲಿದೆ. 6960 ನೌಕರರ ಮೇಲಿನ ಕೇಸ್ ಖುಲಾಸೆ ಮಾಡಲಾಗಿದೆ.

ಡಿಸ್ಮಿಸ್, ಸಸ್ಪೆಂಡ್, ಐದು ಸಾವಿರ ರುಪಾಯಿ ದಂಡ ಕಟ್ಟಬೇಕಿದ್ದ, ಇನ್ಕ್ರಿಮೆಂಟ್​ ಕಟ್ ಆಗುವ ಭಯದಲ್ಲಿದ್ದ 6960 ನೌಕರರಿಗೆ ಈ ಮೂಲಕ ಸಿಹಿಸುದ್ದಿ ಸಿಕ್ಕಿದೆ.  ಚಾಲನೆ ವೇಳೆ ಮೊಬೈಲ್ ಬಳಕೆ, ಟಿಕೆಟ್ ಸರಿಯಾಗಿ ನೀಡದಿರುವುದು, ಗೈರು ಹಾಜರಿ, ಸಂಚಾರಿ ನಿಯಮ ಉಲ್ಲಂಘನೆ, ಬಸ್​ಗಳನ್ನು ಎಲ್ಲಂದರಲ್ಲಿ ನಿಲ್ಲಿಸುವುದು, ಡೋರ್ ಹಾಕದೆ ಬಸ್ ಚಾಲನೆ ಮಾಡಿದ್ದು, ಯೂನಿಫಾರಂ ಹಾಕದೆ ಡ್ಯೂಟಿ ಮಾಡಿರುವುದು ಇಂತಹ ಎಲ್ಲಾ ತಪ್ಪುಗಳಿಂದ ಶಿಕ್ಷೆಗೆ ಒಳಗಾಗಿದ್ದ ಚಾಲಕರ ಮತ್ತು ನಿರ್ವಾಹಕರ  ಪ್ರಕರಣ​ಗಳನ್ನು ಬಿಎಂಟಿಸಿ ವಜಾ ಮಾಡಿದೆ.

Key words: Good news -BMTC –drivers- operators-All-cases- acquitted.

Tags :

.