For the best experience, open
https://m.justkannada.in
on your mobile browser.

ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲನೆ: ಮಂಗಳವಾರ ರಜೆ ದಿನವೂ ಮೈಸೂರು ಮೃಗಾಲಯ ಓಪನ್

04:43 PM Dec 23, 2023 IST | prashanth
ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲನೆ  ಮಂಗಳವಾರ ರಜೆ ದಿನವೂ ಮೈಸೂರು ಮೃಗಾಲಯ ಓಪನ್

ಮೈಸೂರು, ಡಿಸೆಂಬರ್, 23,2023(www.justkannada.in): ಕೋವಿಡ್ ಹಿನ್ನೆಲೆ ರಾಜ್ಯ ಸರ್ಕಾರ ಯಾವ ಮಾರ್ಗಸೂಚಿ ಅನುಸರಿಸಲು ನಿರ್ದೇಶನ‌ ನೀಡಿದೆಯೋ  ಅದನ್ನ ನಾವು ಪಾಲನೆ ಮಾಡುತ್ತಿದ್ದೇವೆ ಎಂದು ಮೈಸೂರು ಮೃಗಾಲಯದ ವ್ಯವಸ್ಥಾಪಕ‌ ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಹೇಶ್ ಅವರು, ಸದ್ಯ ಸರ್ಕಾರ ಕೋವಿಡ್ ಮಾರ್ಗಸೂಚಿಯಲ್ಲಿ ಎಲ್ಲರಿಗೂ ಮಾಸ್ಕ್ ಕಡ್ಡಾಯ ಮಾಡಿಲ್ಲ. 60 ವರ್ಷ ತುಂಬಿದವರಿಗೆ ಮಾತ್ರ ಕಡ್ಡಾಯ ಅಂತ  ಹೇಳಿದೆ. ಇನ್ನೂ ಕ್ರಿಸ್ಮಸ್, ಹೊಸವರ್ಷ ಇರುವುದರಿಂದ  ಕಟ್ಟುನಿಟ್ಟಿನ‌  ಕ್ರಮ  ಜರುಗಿಸಲು ಮುಂದಾಗಿಲ್ಲ. ಸದ್ಯ ಸರ್ಕಾರ ಯಾವ ಮಾರ್ಗಸೂಚಿ ಅನುಸರಿಸಲು ನಿರ್ದೇಶನ‌  ನೀಡಿದೆಯೋ ಅದನ್ನ ನಾವು ಪಾಲನೆ ಮಾಡುತ್ತಿದ್ದೇವೆ. ಜನರಿಗೂ ಅರಿವು ಮೂಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಕ್ರಿಸ್ಮಸ್, ಹೊಸ ವರ್ಷಾಚರಣೆ ಇರುವುದರಿಂದ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ವಾರಾಂತ್ಯದಲ್ಲಿ ಒಂದು  ದಿನಕ್ಕೆ 10 ರಿಂದ 15 ಸಾವಿರಕ್ಕೂ ಹೆಚ್ಚು ಜನ ಮೃಗಾಲಯಕ್ಕೆ  ಭೇಟಿ  ಕೊಡುತ್ತಾರೆ.  ಮುಂದಿನ  ಮಂಗಳವಾರ  ಕ್ರಿಸ್ಮಸ್ ಪ್ರಯುಕ್ತ ರಜೆ ಇರುವುದಿಲ್ಲ.  ರಜೆ ದಿನದಲ್ಲೂ  ಎಂದಿನಂತೆ ಮೃಗಾಲಯ ತೆರೆದಿರುತ್ತದೆ  ಎಂದು  ಮೃಗಾಲಯದ  ವ್ಯವಸ್ಥಾಪಕ‌ ನಿರ್ದೇಶಕ  ಮಹೇಶ್ ಹೇಳಿದರು.

Key words: Government-Covid- guidelines-Mysore Zoo - open - Tuesday - holiday

Tags :

.