For the best experience, open
https://m.justkannada.in
on your mobile browser.

ಭಾರತದಲ್ಲಿ ಸ್ಥಿರ ಬಹುಮತದ ಸರ್ಕಾರ: ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತು

11:38 AM Jun 27, 2024 IST | prashanth
ಭಾರತದಲ್ಲಿ ಸ್ಥಿರ ಬಹುಮತದ ಸರ್ಕಾರ  ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತು

ವದೆಹಲಿ,ಜೂನ್,27,2024 (www.justkannada.in): ಭಾರತದಲ್ಲಿ ಸ್ಥಿರ ಬಹುಮತದ ಸರ್ಕಾರವನ್ನ ಹೊಂದಿದೆ. 3ನೇ ಬಾರಿ  ನರೇಂದ್ರ ಮೋದಿ ಅವರ ಮೇಳೆ ವಿಶ್ವಾಸವಿಟ್ಟು ಅಧಿಕಾರ ನೀಡಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ನುಡಿದರು.

ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಇಂದು ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರಮೋದಿ, ಸ್ಪೀಕರ್ ಓಂ ಬಿರ್ಲಾ, ಹೊಸದಾಗಿ ಆಯ್ಕೆಯಾದ ಎಲ್ಲ ಸಂಸದರಿಗೆ ಅಭಿನಂದನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಆರು ದಶಕಗಳ ನಂತರ ದೇಶದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸ್ಥಿರ ಸರ್ಕಾರ ರಚನೆಯಾಗಿದೆ. ಜನರು ಮೂರನೇ ಬಾರಿಗೆ ಈ ಸರ್ಕಾರದ ಮೇಲೆ ನಂಬಿಕೆ ತೋರಿಸಿದ್ದಾರೆ. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದಾರೆ.  ಜಮ್ಮುಕಾಶ್ಮೀರದ ಮತದಾರರ ಬದಲವಣೆ ಕಂಡು ಸಂತಸವಾಗಿದೆ ಎಂದರು.

ಭಾರತ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶ . 2024ರ ಚುನಾವಣೆ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ ಭಾರತವು ಸ್ಥಿರ ಬಹುಮತದ ಸರ್ಕಾರ ಹೊಂದಿದೆ.  ಕಾಶ್ಮೀರವು ಮತದಾನ ಮೂಲಕ ಜಗತ್ತಿಗೆ  ಸಂದೇಶ ಸಾರಿದೆ. ಈ ಭಾರಿಯ ಬಜೆಟ್ ಐತಿಹಾಸಿಕ ಬಜೆಟ್ ಆಗಲಿದೆ.  ಈ ಬಜೆಟ್ ಸರ್ಕಾರದ ದೂರದೃಷ್ಟಿಯ ಪರಿಣಾಮಕಾರಿ ದಾಖಲೆಯಾಗಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

Key words: Government, India, President, Draupadi Murmu

Tags :

.