HomeBreaking NewsLatest NewsPoliticsSportsCrimeCinema

ನಾವು ವಚನ ಭ್ರಷ್ಟರಲ್ಲ, ವಚನ ಪಾಲಕರು: ಪಂಚ ಗ್ಯಾರಂಟಿ ಜಾರಿ ಕುರಿತು ಸಿಎಂ ಸಿದ್ದರಾಮಯ್ಯ ಟ್ವಿಟ್.  

01:00 PM Jan 13, 2024 IST | prashanth

ಬೆಂಗಳೂರು,ಜನವರಿ,13,2024(www.justkannada.in): ನಿನ್ನೆ ಶಿವಮೊಗ್ಗದಲ್ಲಿ ಅಧಿಕೃತವಾಗಿ ಯುವನಿಧಿ ಯೋಜನೆಗೆ ಚಾಲನೆ ನೀಡಿದ ಬಳಿಕ ಐದು ಗ್ಯಾರಂಟಿ ಯೋಜನೆಗಳನ್ನ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ್ದು ಈ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನುಡಿದಂತೆ ನಡೆಯುತ್ತೇವೆ ಎನ್ನುವುದು ನಾವು ಜನತೆಗೆ ನೀಡಿರುವ ವಚನ. ನಾವು ಉಳಿದವರಂತೆ ವಚನ ಭ್ರಷ್ಟರಲ್ಲ, ವಚನ ಪಾಲಕರು.

ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಐದಕ್ಕೆ ಐದೂ  ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದು ಜನರಿಂದ ಆಯ್ಕೆಯಾದ ಒಂದು ಸರ್ಕಾರದ ಕರ್ತವ್ಯ, ಈ ಯೋಜನೆಗಳು ದುರುಪಯೋಗ ಆಗದಂತೆ ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿರುವುದು ನಿಮ್ಮೆಲ್ಲರ ಕರ್ತವ್ಯ ಎಂದು ಹೇಳಿದ್ದಾರೆ.

ನಿಮ್ಮದೇ ತೆರಿಗೆ ಹಣ, ನಿಮ್ಮದೇ ಕಲ್ಯಾಣ ಕಾರ್ಯಕ್ರಮಗಳು, ಇವು ಉಚಿತ ಯೋಜನೆಗಳು ಎಂಬ ತಪ್ಪು ಕಲ್ಪನೆ ಬೇಡ. ಗ್ಯಾರಂಟಿಗಳ ಪ್ರತಿ ಪೈಸೆಯೂ ನಿಮ್ಮ ಬದುಕಿಗೆ ಸದುಪಯೋಗವಾಗಬೇಕು.

ಚುನಾವಣಾ ಪ್ರಣಾಳಿಕೆಯನ್ನು ಚುನಾವಣಾ ಪ್ರಚಾರಕ್ಕೆ ಸೀಮಿತಗೊಳಿಸದೆ ಅದನ್ನು ಕಾರ್ಯರೂಪಕ್ಕೆ ತಂದು, ಜನರ ಬದುಕಲ್ಲಿ ಅವುಗಳ ಪ್ರತಿಫಲ ಕಾಣಬೇಕು ಎಂಬುದು ಆಶಯ ನಮ್ಮದು. ನಮ್ಮ ಸರ್ಕಾರದ ಸದಾಶಯಕ್ಕೆ ತಮ್ಮೆಲ್ಲರ ಬೆಂಬಲವಿರಲಿ. ಗ್ಯಾರಂಟಿಗಳ ಗೆಲುವು, ಕರ್ನಾಟಕದ ಗೆಲುವು, ನಿಮ್ಮೆಲ್ಲರ ಗೆಲುವು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Key words: government - keep - Enforcement - guarantee -promises- CM -Siddaramaiah.

Tags :
government - keep - Enforcement - guarantee -promises- CM -Siddaramaiah.
Next Article