HomeBreaking NewsLatest NewsPoliticsSportsCrimeCinema

ರಾಜ್ಯಪಾಲರು ಆತ್ಮ ಮುಟ್ಟಿ ನೋಡಿ ಕೊಳ್ಳಲಿ, ಯಾವುದೋ ಒತ್ತಡಕ್ಕೆ ನೀವು ಮಣಿದಿದ್ದಿರಿ: ವಾಟಾಳ್‌ ನಾಗರಾಜ್

02:41 PM Aug 05, 2024 IST | mahesh

 

ಮೈಸೂರು, Aug.05,2024: (www.justkannada.in news) ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರ ಶೋಕಾಸ್ ನೋಟೀಸ್ ಜಾರಿ. ರಾಜ್ಯಪಾಲರ ನಡೆ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ.

ನಗರದ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ. ರಾಜ್ಯಪಾಲರು ಕೂಡಲೇ ತಮ್ಮ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹ. ಪ್ರತಿಭಟನೆಯಲ್ಲಿ ಹಲವು ಕನ್ನಡಪರ ಸಂಘಟನೆಗಳ ಹೋರಾಟಗಾರು ಭಾಗಿ.

ರಾಜ್ಯದಲ್ಲಿ ರಾಜ್ಯಪಾಲರು ಬಹಳ ಒಳ್ಳೆಯವರು, ಅವರಿಗೆ ಯಾರದೋ ಒತ್ತಡಕ್ಕೆ ಮಣಿದು ಶೋಕಾಸ್ ನೋಟೀಸ್ ಜಾರಿ ಮಾಡಿದ್ದಾರೆ ಅನ್ಸುತ್ತೆ. ಅವರು ಚಿಂತನೆ ಮಾಡುವ ವ್ಯಕ್ತಿ. ತಮಿಳುನಾಡು ಮಹಾರಾಷ್ಟ್ರ ರಾಜ್ಯಪಾಲರ ತರ ಅಲ್ಲ.

ನಾನು ಒಂದು ಸಮಾರಂಭದಲ್ಲಿ ರಾಜ್ಯಪಾಲರಿಗೆ ಹೇಳಿದ್ದೆ, ನೀವು ಬೇರೆ ರಾಜ್ಯಪಾಲರ ತರ ಅಲ್ಲ ಗಂಭೀರ ವ್ಯಕ್ತಿ ಚಿಂತಕರು ಎಂದಿದ್ದೆ. ಒಬ್ಬ ಕನ್ನಡ ಪಂಡಿತರನ್ನು ಇಟ್ಟುಕೊಂಡು ಕನ್ನಡ ಕಲಿಯಿರಿ ಎಂದಿದ್ದೆ. ಇಂತಹ ವ್ಯಕ್ತಿ ಯಾರೋ ದೂರು ಕೊಟ್ರು ಅಂತ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ

ಬಸ್ ಸ್ಟ್ಯಾಂಡ್ ಬಳಿ ನಿಂತವರು, ಕಾಲಸಿಪಾಳ್ಯ ದಿಂದ ಬಂದವರು ದೂರು ಕೊಡಬಹುದು.  ಸಿಎಂ ಗೆ ಶೋಕಾಸ್ ನೊಟೀಸ್ ಕೊಡುವಾಗ ಸ್ವಲ್ಪ ಯೋಚನೆ ಮಾಡಬೇಕಿತ್ತು. ಒಂದು ಕಡೆ ಪಾದಯತ್ರೆ ಇತ್ತ ಕಡೆ ರಾಜ್ಯಪಾಲರ ಭೇಟಿ, ಇಂತಹ ನಾಟಕ ರಾಜ್ಯದಲ್ಲಿ ನಡೆದಿದೆ. ರಾಜ್ಯಪಾಲರು ಯಾರ ಒತ್ತಡಕ್ಕೆ ಮಣಿದಿದ್ದಾರೆ ಗೊತ್ತಿಲ್ಲ.

ಸರ್ಕಾರದ ಮೇಲೆ ಹಿಂದೆಂದೂ ಈ ರೀತಿ ರಾಜ್ಯಪಾಲರು ಗಧಾ ಪ್ರಹಾರ ಮಾಡಿಲ್ಲ. ಯಾರೋ ಕೊಟ್ಟ ದೂರಿನ ಮೇಲೆ ನೀವು ನೋಟಿಸ್ ಕೊಟ್ಟಿದ್ದೀರಿ. ಪ್ರಧಾನಿ ಅವ್ರು ಹೇಳಿದ್ದಾರಾ ? ಬಿಜೆಪಿ ಅವ್ರು ಹೇಳಿದ್ದಾರಾ . ನೀವು ಸಂವಿಧಾನ ರಕ್ಷಣೆ ಮಾಡುವವರು. ರಾಜ್ಯಪಾಲರು ಆತ್ಮ ಮುಟ್ಟಿ ನೋಡಿ ಕೊಳ್ಳಲಿ, ನಿಮ್ಮ ಮೇಲೆ ನಾನು ಆರೋಪ ಮಾಡ್ತಿಲ್ಲ. ಯಾವುದೋ ಒತ್ತಡಕ್ಕೆ ನೀವು ಮಣಿದಿದ್ದಿರಿ. ನೀವು ತುರ್ತು ಶಾಸನ ಸಭೆ ಕರೆದು ದೂರಿನ ಬಗ್ಗೆ ಚರ್ಚೆ ಮಾಡಿ. ವಿರೋಧ ಪಕ್ಷದ ನಾಯಕರನ್ನು ಇಟ್ಟುಕೊಂಡು ಚರ್ಚೆ ಮಾಡಿ. ಇಲ್ಲದಿದ್ದರೆ ಹೈ ಕೋರ್ಟ್, ಸುಪ್ರೀಂ ಕೋರ್ಟ್ ಇದೇ ಅಲ್ಲಿ ಡಿಸೈಡ್ ಮಾಡ್ಲಿ, ಅದನ್ನು ಬಿಟ್ಟು ಸರ್ಕಾರ ಉರುಳಿಸುವ ಪ್ರಯತ್ನ ಸರಿಯಲ್ಲ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ರು, ಈಗ ಒಂದು ವರ್ಷ ಸಿಎಂ ಆಗಿದ್ದಾರೆ . ಅನುಭವವಿರುವ ವ್ಯಕ್ತಿ.

ಸಿದ್ದರಾಮಯ್ಯ ನಂತರ ಯಾರು?

ಸಿಎಂ ಆಗಲು ಯಾವ ಪಕ್ಷದಲ್ಲೂ ಯಾರು ಅರ್ಹ ವ್ಯಕ್ತಿ ಇಲ್ಲ , ಇವತ್ತಿನ ಸಿದ್ದರಾಮಯ್ಯ ಸನ್ಯಾಸಿ ತರ ಕಾಣುತ್ತಿದ್ದಾರೆ. ರಾಜ್ಯಪಾಲರೇ ನೀವು ನೀಡಿರುವ ನೋಟೀಸ್ ಹಿಂಪಡೆಯಿರಿ. ಸಿದ್ದರಾಮಯ್ಯ ಹೆದರುವ ಅವಶ್ಯಕತೆ ಇಲ್ಲ. ಎಸ್.ಆರ್ ಬೊಮ್ಮಾಯಿ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಿದ್ರು, ಅದನ್ನು ಸುಪ್ರೀಂ ಕೋರ್ಟ್ ತಪ್ಪು ಎಂದು ತೀರ್ಪು ನೀಡಿತ್ತು. ಈಗಲೂ ನಾನು ಅದನ್ನೇ ಹೇಳ್ತೀನಿ. ನೋಟಿಸ್ ವಾಪಸ್ ಪಡೆಯಿರಿ. ಯಾರದೇ ಸರ್ಕಾರ ಇರ್ಲಿ, ಯಾರೇ ಸಿಎಂ ಆಗಿರ್ಲಿ ಈ ರೀತಿ ರಾಜ್ಯಪಾಲರು ನಡೆದುಕೊಳ್ಳ ಬಾರದು.

ಡಿಕೆಶಿ ಕುಮಾರಸ್ವಾಮಿ ವಾಕ್ಸಮರ :

ಡಿಕೆಶಿ, ಕುಮಾರಸ್ವಾಮಿ ಇಬ್ಬರು ಮಾತನಾಡುತ್ತಿರುವುದು ರಾಜ್ಯಕ್ಕೆ ಅಗೌರವ, ತೂಕದ ಮಾತುಗಳನ್ನು ಆಡಬೇಕು. ಇದು ಲಜ್ಜೆಗೆಟ್ಟ ಮಾತುಗಳು, ಇವರಿಬ್ಬರೂ ಕೂಡ ಅರ್ಥ ಮಾಡ್ಕೋಬೇಕು . ಇಬ್ಬರು ಸಿಎಂ ಆಗಿದ್ದವರು, ಇನ್ನೊಬ್ರು ಡಿಸಿಎಂ ಆಗಿದ್ದವರು ಡಿಕೆಶಿ ಕುಮಾರಸ್ವಾಮಿಗೆ ಕಿವಿಮಾತು ಹೇಳಿದ ವಾಟಾಳ್ ನಾಗರಾಜ್

ಪಾದಯಾತ್ರೆ ಅಂದರೆ ಭ್ರಷ್ಟ ಯಾತ್ರೆ ಅಲ್ಲ, ಇದನ್ನು ಯಡಿಯೂರಪ್ಪ , ಅವರ ಪುತ್ರ, ಕುಮಾರಸ್ವಾಮಿ ಎಲ್ಲರೂ ತಿಳಿದುಕೊಳ್ಳಬೇಕು. ಪಾದಯಾತ್ರೆ ಅಂದರೆ ಮಹಾತ್ಮ ಗಾಂಧಿ ಮಾಡಿದ್ರಲ್ಲ ಅದು. ಇವ್ರು 3 ಕೋಟಿ, 4 ಕೋಟಿ ಕಾರಿನಲ್ಲಿ ಬಂದು ಪಾದಯಾತ್ರೆ ಮಾಡಿದ್ರೆ ಅದಕ್ಕೊಂದು ಬೆಲೆ. ಜೆಡಿಎಸ್ ಬಿಜೆಪಿ ಪಾದಯಾತ್ರೆ ಬಗ್ಗೆ  ವಾಟಾಳ್ ನಾಗರಾಜ್ ವ್ಯಂಗ್ಯ.

key words: Let the, Governor, touch, his soul, you succumbed, to some pressure, Vatal Nagaraj

Tags :
Governorhis soulLet theto some pressuretouchVatal Nagarajyou succumbed
Next Article