ಸರ್ಕಾರ ಅತ್ಯಾಚಾರಿಗಳ ಪರ ನಿಂತಿದೆ: ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ- ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ.
ಹುಬ್ಬಳ್ಳಿ, ಜನವರಿ,20,2024(www.justkannada.in): ಹಾನಗಲ್ ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರ ಅತ್ಯಾಚಾರಿಗಳ ಪರ ನಿಂತಿದೆ. ಅಪರಾಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ. ಹಾನಗಲ್ ನಲ್ಲಿ ಗ್ಯಾಂಗ್ ರೇಪ್ ಆಗಿದೆ. ನೈತಿಕ ಪೊಲೀಸ್ ಗಿರಿಯಂತಹ ಪ್ರಕರಣ ನಡೆಯುತ್ತಿದೆ ರಾಜ್ಯದಲ್ಲಿ ಇಂಥಾ ಗ್ಯಾಂಗ್ ಆಕ್ಟಿವ್ ಆಗಿದೆ. ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಪ್ರಕರಣವನ್ನ ಎಸ್ ಐಟಿಗೆ ಕೊಡಿ ಅಂದ್ರೂ ಸರ್ಕಾರ ಕೊಡುತ್ತಿಲ್ಲ ರಾಜ್ಯ ಸರ್ಕಾರ ಸತ್ತು ಹೋಗಿದೆಯಾ..? ಎಂದು ಕಿಡಿಕಾರಿದರು.
ಸರ್ಕಾರ ರೇಪಿಸ್ಟ್ಗಳ ಜೊತೆ ನಿಂತಿದೆ. SITಗೆ ಕೊಡಿ ಅಂದ್ರೂ ಸರ್ಕಾರ ಕೊಡ್ತಿಲ್ಲ. ಪೋಸ್ಕೋ ಕೇಸ್ನಲ್ಲಿ ಕೇಸ್ ದಾಖಲು ಮಾಡಿಲ್ಲ. ಸುಳ್ಳು ಮೆಡಿಕಲ್ ಎಕ್ಸಾಮಿನ್ ಆಗಿವೆ. ಇದು ಮೆಡಿಕೋ ಲೀಗಲ್ ಕೇಸ್, ಸರ್ಕಾರ ಸಂತ್ರಸ್ತೆ ಬಗ್ಗೆ ಜವಾಬ್ದಾರಿ ತಗೊಬೇಕು. ಸಿಎಂ ಶಾಸಕರಿಗೆ ಹೇಳಿದ್ದೀನಿ ಅಂತಾರೆ. ಅಂದ್ರೆ ಸರ್ಕಾರ ಸತ್ತಿದೆಯಾ? ಆರೋಗ್ಯ ಇಲಾಖೆ ಸತ್ತಿದೆಯಾ ಎಂದು ಪ್ರಶ್ನಿಸಿದರು.
Key words: Govt -stands – rapists- Former CM -Bommai