HomeBreaking NewsLatest NewsPoliticsSportsCrimeCinema

ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಶೇಕಡಾವಾರು ಬದಲಾಗಿ 10 ಯೂನಿಟ್ ವಿದ್ಯುತ್ ನೀಡಲು ತೀರ್ಮಾನ.

05:27 PM Jan 18, 2024 IST | prashanth

ಬೆಂಗಳೂರು,ಜನವರಿ,18,2024(www.justkannada.in):  ರಾಜ್ಯ ಸರ್ಕಾರವು ಗೃಹಜ್ಯೋತಿ ಫಲಾನುಭವಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಹೆಚ್ಚವರಿ ಶೇ. 10% ಬದಲಾಗಿ, 10 ಯೂನಿಟ್‌ ಉಚಿತ ವಿದ್ಯುತ್‌ ನೀಡಲು  ತೀರ್ಮಾನಿಸಿದೆ.

ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು ಸಭೆ ಬಳಿಕ ಮಾತನಾಡಿ ಮಾಹಿತಿ ನೀಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್, ಗೃಹ ಜ್ಯೋತಿ ಯೋಜನೆ ಅಡಿ ಶೇ.10% ಬದಲು 10 ಯೂನಿಟ್ ವಿದ್ಯುತ್  ನೀಡಲು ನಿರ್ಧಾರ ಮಾಡಲಾಗಿದೆ ಎಂದರು.

ವಿದ್ಯುತ್ ಸರಬರಾಜು ಕಂಪನಿಗಳು ಯಪಿಸಿಎಲ್ ನವರಿಗೆ ಪಾವತಿಸಬೇಕಾದ ವಿವಾದಿತ ಮೊತ್ತದ ಕುರಿತು ಚರ್ಚೆ ನಡೆಸಲಾಗಿದೆ.  ಸೆಂಟ್ರಲ್ ಇಆರ್.ಸಿಯವರ ಆದೇಶದ ಕುರಿತು ಚರ್ಚೆ ನಡೆಸಲಾಗಿದೆ. ವಿವಿಧ ಭಿನ್ನ ಕಾನೂನು ಅಭಿಪ್ರಾಯಗಳು ವ್ಯಕ್ತವಾಗಿದೆ. ಲೇಟ್ ಪೇಮೆಂಟ್ ಸರ್ಚಾರ್ಜ್ 1348 ಕೋಟಿ 419 ಕೋಟಿ ನೀಡಬೇಕಾಗಿದೆ. ಈ ಬಗ್ಗೆ ಮುಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

ಇಂದನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ,  48 ಯುನಿಟ್ ಕಡಿಮೆ ಇದ್ದವರಿಗೆ 10% ವಿದ್ಯುತ್ ನೀಡಲು ಈ ಮೊದಲು ತೀರ್ಮಾನಿಸಲಾಗಿತ್ತು. ಈಗ 10 ಯುನಿಟ್  ವಿದ್ಯುತ್ ಕೊಡಲು ತೀರ್ಮಾನಿಸಿದ್ದೇವೆ. 48 ಯೂನಿಟ್ ಕೊಟ್ರೂ ಕಡಿಮೆ ಯೂಸ್ ಮಾಡುತ್ತಿದ್ದರು. ಕೇವಲ 20-25 ಯುನಿಟ್ ಯೂಸ್ ಆದ್ರೆ ಶೇ.2 ರಷ್ಟು ಸಿಗುತ್ತಿತ್ತು.

ಈಗ 48 ಯುನಿಟ್  ಇರೋದು 58 ಯುನಿಟ್ ಆಗುತ್ತದೆ. ಮುಂದಿನ ಬಿಲ್ಲಿಂಗ್ ನಲ್ಲೇ ಇದು ಆ್ಯಡ್ ಆಗಿ ಬರುತ್ತೆ ನಮಗೆ ಹೊರೆ, ಆದರೆ ಬಡವರಿಗೆ ಅನುಕೂಲ ಆಗುತ್ತದೆ. ಎಷ್ಟೋ ಜನರಿಗೆ ಜೀರೋ ಬಿಲ್ ಬರುತ್ತಿರಲಿಲ್ಲ. ಹಾಗಾಗಿ ಅವರಿಗೆ ಅನುಕೂಲ ಆಗಲಿದೆ.  ಆ ಹಿನ್ನೆಲೆ ಸಿಎಂ ನಿರ್ಧಾರ ಮಾಡಿದ್ದಾರೆ. ವಾರ್ಷಿಕವಾಗಿ 500ರಿಂದ 600 ಕೋಟಿ ಹೆಚ್ಚುವರಿ ಆಗುತ್ತದೆ ಎಂದು ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.

Key words: Griha Jyoti Yojana - Decision -provide -10 units - electricity -instead - percentage.

Tags :
Griha Jyoti Yojana - Decision -provide -10 units - electricity -instead - percentage.
Next Article