ಜಿಟಿ ಮಾಲ್ ನಲ್ಲಿ ರೈತನಿಗೆ ತಡೆ: ಸದಾ ಪಂಚೆಯಲ್ಲಿ ತಿರುಗಾಡುವ ಸಿಎಂ ಸಿದ್ದರಾಮಯ್ಯಗೆ ಮಾಡಿದ ಅಪಮಾನ- ಕುರುಬೂರು ಶಾಂತಕುಮಾರ್
03:13 PM Jul 17, 2024 IST
|
prashanth
ಮೈಸೂರು,ಜುಲೈ,17,2024 (www.justkannada.in): ಪಂಚೆ ಧರಿಸಿ ಬಂದಿದ್ದಕ್ಕೆ ರೈತನಿಗೆ ಬೆಂಗಳೂರಿನ ಜಿ.ಟಿ ಮಾಲ್ ನಲ್ಲಿ ಅಪಮಾನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕುರುಬೂರು ಶಾಂತಕುಮಾರ್, ಇದು ಸದಾ ಪಂಚೆಯಲ್ಲಿ ತಿರುಗಾಡುವ ಸಿಎಂ ಸಿದ್ದರಾಮಯ್ಯ ಗೆ ಮಾಡಿದ ಅಪಮಾನ. ಇದು ರಾಜ್ಯದ ರೈತರಿಗೆ ಮಾಡಿರುವ ಅಪಮಾನ. ಪಂಚೆ ಈ ದೇಶದ ಸಂಸ್ಕೃತಿ. ಅವಿವೇಕಿಗಳು ಅದಕ್ಕೆ ಅವಮಾನ ಆಗುವಂತ ಕೆಲಸ ಮಾಡಿದ್ದಾರೆ. ಸರ್ಕಾರ ತಕ್ಷಣ ಮಾಲ್ ಮಾಲೀಕನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
ಮಾಲ್ ಮಾಲೀಕ ರಾಜ್ಯದ ಜನರ ಬೇಷರತ್ ಕ್ಷಮೆ ಕೇಳಬೇಕು. ಇದೆರಡೂ ಆಗದಿದ್ರೆ ನಾವು ಚೆಡ್ಡಿ ಹಾಕೊಂಡು ಮಾಲ್ ಪ್ರವೇಶ ಮಾಡುತ್ತೇವೆ. ಪಂಚೆಯಲ್ಲಿ, ಚೆಡ್ಡಿಯಲ್ಲಿ ಮಾಲ್ ಪ್ರವೇಶ ಮಾಡುತ್ತೇವೆ. ಕೈಯಲ್ಲಿ ಬಾರುಕೋಲು ಹಿಡಿದು ಹೋಗಿ ಮಾಲೀಕನನ್ನೇ ಯಾಕಪ್ಪ ಅಂತ ಕೇಳುತ್ತೇವೆ ಎಂದು ಕಿಡಿಕಾರಿದರು.
Key words: GT Mall, farmer,insult, Kuruburu Shanthakumar
Next Article