ಅರ್ಹರಿಗೆ ಗ್ಯಾರಂಟಿ: ಶಕ್ತಿಯೋಜನೆ ಬಿಟ್ಟು ಉಳಿದ ಯೋಜನೆಗಳ ಪರಿಷ್ಕರಣೆ- ಸಚಿವ ಕೆ.ಎಚ್ ಮುನಿಯಪ್ಪ
ನವದೆಹಲಿ,ಆಗಸ್ಟ್,14,2024 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಗೆ ಸಚಿವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಕೆ.ಎಚ್ ಮುನಿಯಪ್ಪ, ಗ್ಯಾರಂಟಿ ಯೋಜನೆ ಬಗ್ಗೆ ಸತೀಶ್ ಜಾರಕಿಹೊಳಿ ಅಭಿಪ್ರಾಯ ವೈಯಕ್ತಿಕ. ಗ್ಯಾರಂಟಿ ಯೋಜನೆಯನ್ನ ಬಡವರಿಗೆ ಜಾರಿ ಮಾಡಲಾಗಿದೆ ಬಡತನದಲ್ಲಿ ಇರುವವರಿಗೆ ಗ್ಯಾರಂಟಿಗಳು ಅವಶ್ಯಕ. ಶಕ್ತಿಯೋಜನೆ ಬಿಟ್ಟು ಉಳಿದ ಯೋಜನೆ ಪರಿಷ್ಕರಣೆ ಮಾಡಬೇಕಿದೆ. ಅರ್ಹರಿಗೆ ಮಾತ್ರ ಅನ್ನಭಾಗ್ಯ ಕೊಡಲು ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ .
ಹಾಗೆಯೇ ಗೃಹ ಲಕ್ಷ್ಮೀ ಯೋಜನೆ ಪರಿಷ್ಕರಣೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಬೇಕು. ನಾವು ಗ್ಯಾರಂಟಿಗೆ ಕತ್ತರಿ ಹಾಕಬೇಂಕೆಂದು ಹೇಳಲ್ಲ ಎಂದು ಮುನಿಯಪ್ಪ ತಿಳಿಸಿದರು.
ಗ್ಯಾರಂಟಿಯಿಂದ ಕ್ಷೇತ್ರ ಅಭಿವೃದ್ದಿಗೆ ಹಿನ್ನೆಡೆಯಾಗುತ್ತಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಚಿವರು ದೂರು ನೀಡಿದ್ದು, ಗ್ಯಾರಂಟಿ ಲೋಪಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಲಾಭ ಸಿಗುವಂತೆ ಮಾನದಂಡ ರೂಪಿಸಿ ಎಂದು ಸಚಿವರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
Key words: Guarantee scheme, revise, Minister, K.H Muniyappa