For the best experience, open
https://m.justkannada.in
on your mobile browser.

ಮೋದಿ ಸಂಪುಟ ಸೇರಿದ್ದು ಸಂತೋಷ: ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ-ಕೇಂದ್ರ ಸಚಿವ ವಿ.ಸೋಮಣ್ಣ.

10:28 AM Jun 10, 2024 IST | prashanth
ಮೋದಿ ಸಂಪುಟ ಸೇರಿದ್ದು ಸಂತೋಷ  ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಕೇಂದ್ರ ಸಚಿವ ವಿ ಸೋಮಣ್ಣ

ನವದೆಹಲಿ,ಜೂನ್,10,2024 (www.justkannada.in): ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಎನ್ ಡಿಎ  ಮೈತ್ರಿಕೂಟ ಅಧಿಕಾರಕ್ಕೇರಿದ್ದು ನಿನ್ನೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಹಾಗೂ ಹಲವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಕರ್ನಾಟಕದಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿಯವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕೇಂದ್ರ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ವಿ.ಸೋಮಣ್ಣ, ಪ್ರಧಾನಿ ಮೋದಿ ಸಂಪುಟ ಸೇರಿದ್ದು ಸಂತೋಷವಾಗಿದೆ.  ಯಾವುದೇ ಖಾತೆ ಕೊಟ್ಟರೂ ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ.  ಮೋದಿ ಅಮಿತ್ ಶಾ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ.  ಎಲ್ಲಾ ಮಾಜಿ ಸಿಎಂ ಬಿಎಸ್ ವೈ ಸೇರಿ ನಾಯಕರನ್ನೂ ಭೇಟಿಯಾಗುತ್ತೇನೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.

Key words: Happy, join, Modi, cabinet, V. Somanna

Tags :

.