For the best experience, open
https://m.justkannada.in
on your mobile browser.

ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಮೇ 30 ರಂದು ‘ಹಾಸನ ಚಲೋ’

06:03 PM May 24, 2024 IST | prashanth
ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಮೇ 30 ರಂದು ‘ಹಾಸನ ಚಲೋ’

ಹಾಸನ, ಮೇ,24,2024 (www.justkannada.in): ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರಿಸಿಕೊಂಡಿರುವ  ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಮೇ 30 ರಂದು ಹಾಸನ ಚಲೋ ನಡೆಸಲು ಕರ್ನಾಟಕ ರಾಜ್ಯ ಜನಪರ ಚಳುವಳಿಗಳ ಒಕ್ಕೂಟ ಮುಂದಾಗಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಜನಪರ ಚಳುವಳಿಗಳ  ಒಕ್ಕೂಟ ಸಂಘಟನೆಯ ಪ್ರಮುಖರಿಂದ ಹೋರಾಟದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮೇ 30 ರಂದು ಮಹಿಳೆಯರ ಘನತೆ ಉಳಿಸಿ, ಹಾಸನದ ಗೌರವ ಕಾಪಾಡಲು ಬೃಹತ್ ಹೋರಾಟ ನಡೆಯಲಿದೆ.

ಹಾಸನ ಚಲೋ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಮುಖಂಡ ಧರ್ಮೇಶ್​,  ಮೇ 30 ರ ಹೋರಾಟಕ್ಕೆ ಸಾಹಿತಿಗಳು, ಚಿಂತಕರು, ಹೋರಾಟಗಾರರು, ಪ್ರಗತಿಪರರು ಸೇರಿ ಸಹಸ್ರಾರು ಜನರು ಭಾಗಿಯಾಗಲಿದ್ದಾರೆ. ಪ್ರಜ್ವಲ್ ರೇವಣ್ಣ ಬಂಧಿಸಿ ಶಿಕ್ಷೆ ವಿಧಿಸಬೇಕು. ವೀಡಿಯೋ ಹಂಚಿಕೆಯ ಷಡ್ಯಂತ್ರ ಮಾಡಿದವರ ವಿರುದ್ದವೂ ಕ್ರಮ ಆಗಬೇಕು ಎಂದು ಹೇಳಿದ್ದಾರೆ.

ಈ ಹೋರಾಟದಲ್ಲಿ ಅಂಗನವಾಡಿ, ಬಿಸಿಯೂಟ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Key words: Hassan Chalo, May 30, arrest, Prajwal Revanna

.