HomeBreaking NewsLatest NewsPoliticsSportsCrimeCinema

ದೇವೇಗೌಡರ ಪತ್ರ ವಿಚಾರ: ಈಗಲಾದರೂ ಪ್ರಜ್ವಲ್ ಬಂದು ತನಿಖೆ ಎದುರಿಸಲಿ- ಗೃಹ ಸಚಿವ ಡಾ.ಜಿ.ಪರಮೇಶ್ವರ್.

03:35 PM May 24, 2024 IST | prashanth

ಬೆಂಗಳೂರು,ಮೇ,24,2024 (www.justkannada.in):  ಎಲ್ಲಿದ್ದರೂ ಭಾರತಕ್ಕೆ ವಾಪಸ್ ಬಂದು ಎಸ್ ಐಟಿ ತನಿಖೆ ಎದುರಿಸು ಎಂದು  ಸಂಸದ ಪ್ರಜ್ವಲ್ ರೇವಣ್ಣಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ಬರೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈಗಲಾದರೂ ಪ್ರಜ್ವಲ್ ಬಂದು ತನಿಖೆ ಎದುರಿಸಲಿ ಎಂದು ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಪರಮೇಶ್ವರ್,  ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದು ಕೋರಿ ಸಿಎಂ ಸಿದ್ದರಾಮಯ್ಯ 2 ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದು ಮಾಡಲಿ ಎಂದು ಆಗ್ರಹಿಸಿದರು.

ದೇವೇಗೌಡರು ಪತ್ರ ಬರೆದಿರೋದು ಗೊತ್ತಾಗಿದೆ. ಈಗಾಲಾದರೂ ಪ್ರಜ್ವಲ್ ಬರಬೇಕು. ನಾವು ಅವರಿವರ ಟ್ವಿಟ್ ಗೆ ಉತ್ತರ ಕೊಡಲ್ಲ. ಎಸ್ ಐಟಿ ತನಿಖೆಯಲ್ಲಿ ಲೋಪವಿದೆಯಾ ಹೇಳಲಿ ಎಂದು ಪರಮೇಶ್ವರ್ ಪ್ರಶ್ನಿಸಿದರು.

Key words: HD Devegowda- Prajwal - investigation - Dr. G. Parameshwar.

Tags :
HD Devegowda- Prajwal - investigation - Dr. G. Parameshwar.
Next Article