HomeBreaking NewsLatest NewsPoliticsSportsCrimeCinema

ಹುಲಿ ಪ್ರತ್ಯಕ್ಷ: ಭಯಭೀತರಾದ ಗ್ರಾಮಸ್ಥರು

11:00 AM Aug 02, 2024 IST | prashanth

ಮೈಸೂರು,ಆಗಸ್ಟ್,2,2024 (www.justkannada.in): ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಗಣಿಶೆಡ್ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು ಭಯಭೀತರಾದ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ನಿನ್ನೆಯಷ್ಟೇ ಮೇಕೆ ಬಲಿ ಪಡೆದಿರುವ ಹುಲಿ, ನಂತರ ಹಸುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಇದೀಗ ಹುಲಿರಾಯ ನಿನ್ನೆ ತಡರಾತ್ರಿ ಪ್ರತ್ಯಕ್ಷಗೊಂಡು ಕ್ಷಣಮಾತ್ರದಲ್ಲಿ ಕಣ್ಮರೆಯಾಗಿದ್ದು, ಹುಲಿ ದೃಶ್ಯ ಕಾರು ಚಾಲಕರ ಮೊಬೈಲ್‌ ನಲ್ಲಿ ಸೆರೆಯಾಗಿದೆ.

ಇನ್ನು ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದರೂ ನಮ್ಮ ವಾಪ್ತಿಗೆ ಬರುವುದಿಲ್ಲ ಎಂದು ಹೆಚ್.ಡಿ ಕೋಟೆ, ಮೇಟಿಕೊಪ್ಪ ಅರಣ್ಯಾಧಿಕಾರಿಗಳು ಪರಸ್ಪರ ನಿರಾಕರಣೆ ಉತ್ತರ ನೀಡಿದ್ದಾರೆ. ಅರಣ್ಯ ಇಲಾಖೆ ನಿರಾಕರಣೆ ಉತ್ತರಕ್ಕೆ ಗ್ರಾಮಸ್ಥರು ಬೇಸರಗೊಂಡಿದ್ದು, ರಾತ್ರಿ ವೇಳೆ ಜಮೀನು ಕಾವಲಿಗೆ ತೆರಳಿ ಬೆಳೆ ರಕ್ಷಿಸಿಕೊಳ್ಳಲು ಭಯಭೀತರಾಗಿದ್ದಾರೆ. ಅಲ್ಲದೆ  ಹುಲಿ ಸೆರೆ ಹಿಡಿಯಿರಿ ಇಲ್ಲವೆ ಅರಣ್ಯಕ್ಕೆ ಓಡಿಸಿ ನಮ್ಮ, ನಮ್ಮ ಸಾಕು ಪ್ರಾಣಿಗಳ ಜೀವ ಉಳಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Key words: HD Kote, Tiger, villagers, Forest Department

Tags :
forest departmenthd kotetigervillagers
Next Article