HomeBreaking NewsLatest NewsPoliticsSportsCrimeCinema

ಅಮವಾಸ್ಯೆ ದಿನವೇ ಜೈಲುಪಾಲದ ಎಚ್.ಡಿ.ರೇವಣ್ಣ..!

06:04 PM May 08, 2024 IST | mahesh
courtesy; internet

 

ಬೆಂಗಳೂರು, ಮೇ.08, 2024: (www.justkannada.in news ) ಮಹಿಳೆಯೊಬ್ಬರನ್ನು ಅಪಹರಿಸಿದ ಆರೋಪದ ಮೇಲೆ ಬಂಧಿತವಾಗಿರುವ ಜನತಾದಳ (ಜಾತ್ಯತೀತ) ಶಾಸಕ ಹೆಚ್.ಡಿ.ರೇವಣ್ಣ, ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್‌ ಆದೇಶ.

ಹೆಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ಗುರುವಾರಕ್ಕೆ ಮುಂದೂಡಿದೆ. ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ಪುತ್ರ ಮತ್ತು ಪ್ರಜ್ವಲ್ ರೇವಣ್ಣ ಅವರ ತಂದೆ ಎಚ್‌ಡಿ ರೇವಣ್ಣ ಅವರನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಆಗ ಮೇ 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಮೊದಲು, ಮಹಿಳೆಯ ಅಪಹರಣದ ಆರೋಪದ ಪ್ರಕರಣದಲ್ಲಿ ಮೇ 4 ರಂದು ಬಂಧನದ ನಂತರ ಎಚ್‌ಡಿ ರೇವಣ್ಣ ಅವರು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶದಲ್ಲಿದ್ದರು. ಸಂತ್ರಸ್ತೆ ತನ್ನ ಮಗ ಪ್ರಜ್ವಲ್ ರೇವಣ್ಣ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ

ಪ್ರಜ್ವಲ್ ರೇವಣ್ಣ ಅವರು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಶ್ಲೀಲ ವಿಡಿಯೋಗಳ ಬಗ್ಗೆ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ನಾಗಲಕ್ಷ್ಮಿ ಚೌಧರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ನಂತರ ಜೆಡಿಎಸ್ ಸಂಸದ ಪ್ರಜ್ವಲ್‌ ರೇವಣ್ಣ ಜರ್ಮನಿಗೆ ಪರಾರಿ.  ಎಸ್‌ಐಟಿ ಮುಂದೆ ಹಾಜರಾಗುವಂತೆ ನೀಡಿದ್ದ ಸಮನ್ಸ್‌ಗಳನ್ನೂ ಅವರು ಪ್ರತಿಕ್ರಿಯಿಸಿಲ್ಲ.

ಅಮವಾಸ್ಯೆ ದಿನವೇ ಜೈಲು :

ಎಚ್.ಡಿ.ರೇವಣ್ಣ ಹಾಗೂ ಕುಟುಂಬದವರು  ಸದಾ ಶಾಸ್ತ್ರ, ಆಚಾರಗಳಲ್ಲಿ ನಂಬಿಕೆ ಇರುವವರು. ಯಾವುದೇ ಕೆಲಸ ಮಾಡುವ ಮುನ್ನ, ರಾಹುಕಾಲ, ಗುಳಿಕಾಲ ಇವೆಲ್ಲವನ್ನು ನೋಡಿಕೊಂಡೆ ಮುಂದಡಿ ಇಡುತ್ತಿದ್ದವರು. ಇಂಥ ರೇವಣ್ಣ ಅವರು ಈಗ ಅಮಾವಾಸ್ಯೆ ದಿನವೇ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

key words :  HD Revanna, jailed , on Amavasya day

summary: 

 

courtesy; internet

Janata Dal (Secular) MLA H D Revanna, who was arrested for allegedly abducting a woman, has been sent to judicial custody till May 14.

HD Revanna and his family have always believed in shastras and rituals. Before doing any work, he used to take care of rahu kaal and gulikaal. Revanna is now serving a jail term on the new moon day.

 

Tags :
hd revannajailedon Amavasya day
Next Article