For the best experience, open
https://m.justkannada.in
on your mobile browser.

ಷಡ್ಯಂತ್ರ ಮಾಡಿ ಹೆಚ್.ಡಿ ರೇವಣ್ಣರನ್ನ ಜೈಲಿಗೆ ಕಳಿಸಿದ್ದಾರೆ- ಶಾಸಕ ಜಿ.ಟಿ ದೇವೇಗೌಡ ಕಿಡಿ.

02:46 PM May 09, 2024 IST | prashanth
ಷಡ್ಯಂತ್ರ ಮಾಡಿ ಹೆಚ್ ಡಿ ರೇವಣ್ಣರನ್ನ ಜೈಲಿಗೆ ಕಳಿಸಿದ್ದಾರೆ  ಶಾಸಕ ಜಿ ಟಿ ದೇವೇಗೌಡ ಕಿಡಿ

ಬೆಂಗಳೂರು,ಮೇ,9,2024 (www.justkannada.in): ಸಂತ್ರಸ್ತ ಮಹಿಳೆಯ  ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ,  ಷಡ್ಯಂತ್ರ ಮಾಡಿ ಹೆಚ್.ಡಿ ರೇವಣ್ಣರನ್ನ ಜೈಲಿಗೆ ಕಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಷಡ್ಯಂತ್ರ ಮಾಡಿ ರೇವಣ್ಣರನ್ನ ಜೈಲಿಗೆ ಕಳುಹಿಸಿದ್ದಾರೆ. ಎಸ್ ಐಟಿ ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಿದೆ.  ಈ ಬಗ್ಗೆ ರಾಜ್ಯಪಾಲರಿಗೆ ದೂರು ಕೊಡಲು ನಿರ್ಧಾರ ಮಾಡಿದ್ದೇವೆ.  ಸಭೇ ಬಳಿಕ ಸ್ಪಷ್ಟ ನಿರ್ಧಾರ ಮಾಡುತ್ತೇವೆ ಎಂದರು.

ಯಾವುದೇ ಕಾರಣಕ್ಕೂ ಮೈತ್ರಿಗೆ ಧಕ್ಕೆಯಾಗುವುದಿಲ್ಲ.  ಪ್ರಧಾನಿ ಮೋದಿ ಮೈತ್ರಿ ಪಕ್ಷಗಳನ್ನ ಕೈ ಬಿಡುವುದಿಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

Key words: HD Revanna, jail,MLA, GT Deve Gowda

Tags :

.