For the best experience, open
https://m.justkannada.in
on your mobile browser.

ಹೆಚ್.ಡಿಕೆ ನನ್ನನ್ನೇ ಉಪಚುನಾವಣೆಗೆ ನಿಲ್ಲುವಂತೆ ಹೇಳಿದ್ದಾರೆ- ಮಾಜಿ ಸಚಿವ ಸಿ.ಪಿ ಯೋಗೇಶ್ವರ್

01:38 PM Jul 05, 2024 IST | prashanth
ಹೆಚ್ ಡಿಕೆ ನನ್ನನ್ನೇ ಉಪಚುನಾವಣೆಗೆ ನಿಲ್ಲುವಂತೆ ಹೇಳಿದ್ದಾರೆ  ಮಾಜಿ ಸಚಿವ ಸಿ ಪಿ ಯೋಗೇಶ್ವರ್

ಚನ್ನಪಟ್ಟಣ,ಜುಲೈ,5,2024 (www.justkannada.in): ಚನ್ನಪಟ್ಟಣ ಉಪಚುನಾವಣೆಗೆ ಈಗಿನಿಂದಲೇ ತಯಾರಿ ಶುರುವಾಗಿದ್ದು ಈಗಾಗಲೇ ಕಾಂಗ್ರೆಸ್ ಪ್ರಚಾರಕ್ಕೆ ಮುಂದಾಗಿದೆ. ಈ ಮಧ್ಯೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆದಿದ್ದು ಈ ಕುರಿತುವ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿ.ಪಿ ಯೋಗೇಶ್ವರ್,  ಹೆಚ್.ಡಿ ಕುಮಾರಸ್ವಾಮಿ ನನ್ನನ್ನೇ ಚುನಾವಣೆಗೆ ನಿಲ್ಲುವಂತೆ ಹೇಳಿದ್ದಾರೆ. ಮೈತ್ರಿ ಪಕ್ಷದಿಂಧ ನಾನೇ ಅಭ್ಯರ್ಥಿ. ಕುಮಾರಸ್ವಾಮಿ ಜತೆ ಚರ್ಚಿಸಿದ್ದೇನೆ. ಕುಮಾರಸ್ವಾಮಿಗೆ ನೀವೇ ಹೆಸರು ಘೋಷಣೆ ಮಾಡಿ ಎಂದು ಹೇಳಿದ್ದೇನೆ. ಕಾಂಗ್ರೆಸ್ ನವರು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.

ವರಿಷ್ಠರು ಅಧಿಕೃತವಾಗಿ ಘೋಷಣೆ ಮಾಡಬೇಕು ಈಗಾಗಲೇ ಮೈತ್ರಿ ಅಭ್ಯರ್ಥಿ ಆಯ್ಕೆಗೆ ಮನವಿ ಮಾಡಿದ್ದೇನೆ. ಅಧಿಕೃತ ಅನುಮೋದನೆ ಕುಮಾರಸ್ವಾಮಿ ನೀಡಬೇಕು ಎಂದು ತಿಳಿಸಿದರು.

Key words:  HDK, by-election, CP Yogeshwar

Tags :

.