For the best experience, open
https://m.justkannada.in
on your mobile browser.

ಹೆಚ್.ಡಿ ಕುಮಾರಸ್ವಾಮಿಗೆ ಯಾರ ಮೇಲೂ ನಂಬಿಕೆ ಇಲ್ಲ- ಸಚಿವ ಚಲುವರಾಯಸ್ವಾಮಿ.

05:47 PM May 30, 2024 IST | prashanth
ಹೆಚ್ ಡಿ ಕುಮಾರಸ್ವಾಮಿಗೆ ಯಾರ ಮೇಲೂ ನಂಬಿಕೆ ಇಲ್ಲ  ಸಚಿವ ಚಲುವರಾಯಸ್ವಾಮಿ

ಮಂಡ್ಯ, ಮೇ,30,2024 (www.justkannada.in): ಹೆಚ್​.ಡಿ ಕುಮಾರಸ್ವಾಮಿ ಗೆ ಯಾರ ಮೇಲೂ ನಂಬಿಕೆ‌ ಇಲ್ಲ, ಪ್ರಧಾನಿ ಮೋದಿ, ಆರ್‌ಎಸ್‌ಎಸ್, ಬಿಜೆಪಿ, ಕಾಂಗ್ರೆಸ್ ಎಲ್ಲರಿಗೂ ಬೈದಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಈ ಕುರಿತು ನಾನು ಪ್ರತಿಕ್ರಿಯೆ ನೀಡಲ್ಲ, ನಾನು ಈ ಬಗ್ಗೆ ಚರ್ಚೆ ಮಾಡಲ್ಲ ಅಂತಾ ಹೇಳಿದ್ದೇನೆ. ಇದು ಸಮಾಜ ತಲೆ ತಗ್ಗಿಸುವ ವಿಚಾರ ಇದು. ಈ ಪ್ರಕರಣವನ್ನು ಡೈವರ್ಟ್ ಮಾಡಲು ಜೆಡಿಎಸ್ ಅವರು ಮಾತಾಡುತ್ತಾರೆ. ಒಬ್ಬ ಹೆಣ್ಣು ಮಗಳನ್ನು ಬಳಿಸಿಕೊಂಡು‌ ಈ ರೀತಿ ಮಾಡಿದರೇ, ಅವರ ಕುಟುಂಬ ಸೇರಿದಂತೆ ಸುತ್ತಮುತ್ತಲಿನ ವಾತಾವರಣದ ಮೇಲೂ ಪ್ರಭಾವ ಬೀರುತ್ತೆ. ಕಾನೂನು ಬದ್ಧವಾಗಿ ಏನು ಆಗುತ್ತೆ ನೋಡೋಣ ಎಂದರು.

ಪ್ರಕರಣ ಕುರಿತು ಪಕ್ಷಪಾತವಿಲ್ಲದೆ ಎಸ್ ಐಟಿ ತನಿಖೆ ನಡೆಸುತ್ತಿದೆ . ಇದು ಚರ್ಚೆ ಮಾಡುವ ವಿಚಾರವಲ್ಲ. ಕಾನೂನು ಬದ್ಧವಾಗಿ ಕ್ರಮವಾಗಬೇಕು. ಇಷ್ಟೊತ್ತಿಗೆ ಎಸ್‌ಐಟಿ ಮುಂದೆ ಪ್ರಜ್ವಲ್‌ನ್ನು‌ ಕುಮಾರಸ್ವಾಮಿ ಕುಟುಂಬ ತಂದು ನಿಲ್ಲಿಸಬೇಕಿತ್ತು. ಅದನ್ನು ಬಿಟ್ಟು ಮಾತಾಡೋದು ಅಲ್ಲ ಎಂದು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

Key words: HDK, no faith, anyone, Chaluvarayaswamy

Tags :

.