ಹೆಚ್.ಡಿಕೆ ಹೇಳುತ್ತಿರುವುದು ಎಲ್ಲವೂ ಸುಳ್ಳು: ನಾನು ಮೋದಿ ಜೊತೆ ಮಾತನಾಡಿಯೇ ಇಲ್ಲ- ಸಿಎಂ ಸಿದ್ದರಾಮಯ್ಯ ತಿರುಗೇಟು.
05:29 PM Apr 30, 2024 IST
|
prashanth
ಬೆಳಗಾವಿ,ಏಪ್ರಿಲ್,30,2024 (www.justkannada.in): ಪ್ರಧಾನಿ ಮೋದಿ ಸಿಎಂ ಸಿದ್ದರಾಮಯ್ಯ ಕುಟುಂಬದ ಮಾನ ಮರ್ಯಾದೆ ಉಳಿಸಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಹೇಳುತ್ತಿರುವುದು ಎಲ್ಲವೂ ಸುಳ್ಳು. ನಾನು ಮೋದಿ ಜೊತೆ ಮಾತನಾಡಿಯೇ ಇಲ್ಲ. ನನ್ನ ಮಗ ಮೃತಪಟ್ಟಿದ್ದು ವಿದೇಶದಲ್ಲಿ ಮೃತದೇಹ ತಂದಿದ್ದೇವೆ ಕುಮಾರಸ್ವಾಮಿ ಆರೋಪವೆಲ್ಲವೂ ಸುಳ್ಳು ಎಂದು ಕಿಡಿಕಾರಿದರು.
ಮೋದಿ ಅವರು ವೋಟ್ ಗಾಗಿ ಅತ್ಯಂತ ನೀಚ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸಂಬಳ ನೀಡಲು ಹಣವಿಲ್ಲ ಎಂದಿದ್ದಾರೆ. ಅಧಿಕಾರಿಗಳಿಗೆ ಸಂಬಳ ನೀಡಲು ಹಣ ಇಲ್ಲ ಎಂದಿದ್ದಾರೆ ಇದು ಹಸಿ ಸುಳ್ಳು. ಅಧಿಕಾರಿಗಳಿಗೆ ಸಂಬಳ ಕೊಡುವುದನ್ನ ನಿಲ್ಲಿಸಿಲ್ಲ ಅಭಿವೃದ್ದಿ ಕೆಲಸಗಳನ್ನೂ ನಿಲ್ಲಿಸಿಲ್ಲ ಎಂದು ಟಾಂಗ್ ಕೊಟ್ಟರು.
Key words: HDK, saying, lie, CM Siddaramaiah
Next Article