ಗ್ಯಾರಂಟಿ ಯೋಜನೆಗಳಿಂದ ಹೆಣ್ಮಕ್ಕಳು ಹೇಗೆ ʼ ದಾರಿ ತಪ್ಪಿದ್ದಾರೆʼ ಎಂಬುದನ್ನು ಎಚ್ಡಿಕೆ ಹೇಳಲಿ: ಪುಷ್ಪಾ ಅಮರನಾಥ್ ಸವಾಲು.
ಮೈಸೂರು, ಏ.15, 2024 : (www.justkannada.in news ) ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರುವುದೇ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತು. 12 ನೆ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗೆ ಸಮಾನತೆ ನೀಡಲಿಕ್ಕೆ ಮುಂದಾದರು. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲಿ ದಾರಿ ತಪ್ಪಿದ ಮಗ ಆಗಿದ್ದಾರೆ.
ಕೆಪಿಸಿಸಿ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮಹಿಳೆಯರು ಯಾವ ರೀತಿ ದಾರಿ ತಪ್ಪಿದಾರೆ ಎನ್ನುವುದನ್ನ ಹೇಳಲಿ.ಗ್ಯಾರಂಟಿ ಯೋಜನೆಗಳಿಂದ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ ಎಂದಿದ್ದಾರೆ. 2 ಬಾರಿ ಸಿಎಂ ಆಗಿದ್ದವರು, ಈ ರೀತಿ ಹೇಳಿಕೆ ಕೊಡೋದು ಸರಿಯಲ್ಲ. ನೆನ್ನೆ ಮಂಡ್ಯದಲ್ಲಿ ಗೋ ಬ್ಯಾಕ್ ಕುಮಾರಸ್ವಾಮಿ ಎಂದು ಪ್ರೊಟೆಸ್ಟ್ ಕೂಡ ಮಾಡಿದ್ವಿ. ಮಂಡ್ಯಕ್ಕೆ ಕುಮಾರಣ್ಣರ ಅವಶ್ಯಕತೆ ಇಲ್ಲ.
ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಕಾರ್ಖಾನೆಗಳು, ಕಚೇರಿಗೆ ಹೋಗುತ್ತಿದ್ದಾರೆ ಇದರಿಂದ ಹೆಣ್ಮಕ್ಕಳು ದಾರಿ ತಪ್ಪಿದ್ದಾರಾ. ಕುಮಾರಣ್ಣ ದಾರಿ ತಪ್ಪಿದ್ರು, ಈಗ ಮಹಿಳೆಯರನ್ನ ದಾರಿ ತಪ್ಪಿಸಲು ಮುಂದಾಗಿದ್ದಾರೆ.
ಮನೆಗೆಲಸದ ಹೆಣ್ಮಕ್ಕಳಿಗೆ ಯಾವುದೇ ಭದ್ರತೆ ಇಲ್ಲ. ಇಂತಹ ಹೆಣ್ಮಕ್ಕಳಿಗೆ 2ಸಾವಿರ ರೂ ಕೊಡುವ ಕಾರ್ಯಕ್ರಮ ಗೃಹಲಕ್ಷ್ಮಿ ಯೋಜನೆ. ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವ ಹಕ್ಕನ್ನ ಕುಮಾರಸ್ವಾಮಿಗೆ ಕೊಟ್ಟಿದ್ದು ಯಾರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ ಹೇಳಿಕೆ.
ಕುಮಾರಸ್ವಾಮಿಯವರು ಹೆಣ್ಮಕ್ಕಳು ಹಗುರವಾಗಿ ಮಾತನಾಡಿದ್ದಾರೆ. ನಾವು ಕನ್ನಡಿಗರು,ಸ್ವಾಭಿಮಾನಿ ಹೆಣ್ಮಕ್ಕಳು. ನೆನ್ನೆ ಕೇವಲ ಮಂಡ್ಯದಲ್ಲಿ ಮಾತ್ರ ಗೋ ಬ್ಯಾಕ್ ಕುಮಾರಸ್ವಾಮಿ ಪ್ರತಿಭಟನೆ ಆಗಿದೆ. ಈ ವಿಚಾರವನ್ನ ರಾಜ್ಯಾದ್ಯಂತ ಮಹಿಳೆಯರು ಖಂಡಿಸುತ್ತಾರೆ. ಕುಮಾರಸ್ವಾಮಿಯವರು ಕ್ಷಮೆ ಕೇಳಿದ್ರೆ ಬಿಡಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಕ್ಷಮೆ ಕೇಳಬೇಕು. ಯಾಕಂದ್ರೆ ಬಿಜೆಪಿ ಜೆಡಿಎಸ್ ಮೈತ್ರಿ ಆಗಿದೆ. ಮೋದಿಯವರು ಬಂದಾಗ ಸುಳ್ಳು ಹೇಳ್ತಾರೆ ವಾಪಾಸ್ ಹೋಗ್ತಾರೆ.
ಮಾಜಿ ಸಿಎಂ ಹೆಚ್.ಡಿಕೆ ಮತ್ತು ಸಂಜಯ್ ಪಾಟೀಲ್ ಗೆ ಮಹಿಳಾ ಆಯೋಗ ನೋಟಿಸ್.
ಮೈಸೂರನ್ನ ಪ್ಯಾರಿಸ್ ಮಾಡ್ತೀನಿ ಎಂದು ಮೋದಿ ಹೇಳಿದ್ರು. ಮೈಸೂರು ಪ್ಯಾರಿಸ್ ಆಗಿದೆಯಾ..? ಹೆಣ್ಮಕ್ಕಳು, ಮಾಧ್ಯಮಗಳಿಗೆ ಉತ್ತರ ನೀಡಲಿಕ್ಕೆ ಆಗದೆ ಮೋದಿ ಓಡಿ ಹೋಗಿದ್ದಾರೆ. ಈಗ ಯಾವ ಮುಖ ಇಟ್ಟುಕೊಂಡು ಓಟ್ ಕೇಳ್ತಿದೀರಾ. ರಾಜ್ಯದ ಜನತೆಯ ಮತ ಕೇಳುವ ಹಕ್ಕು ನಿಮಗಿಲ್ಲ. ಸುದ್ದಿಗೋಷ್ಠಿಯಲ್ಲಿ ಪುಷ್ಪ ಅಮರನಾಥ್ ಹೇಳಿಕೆ.
key words : HDK should tell, how girls have been , 'misled' by , guarantee schemes:, Pushpa Amarnath
ENGLISH SUMMARY :
It is Baba Saheb Dr. Ambedkar that women come into the mainstream of society. It was the wish of B.R. Ambedkar. In the 12th century, Basavana came forward to give equality to women. However, former CM HD Kumaraswamy has become a misguided son in recent times.
Let me tell you how women have gone astray. "It is not right for a two-time CM to make such a statement. Yesterday, we protested in Mandya as 'Go Back Kumaraswamy'. Mandya does not need Kumaranna
There is no security for domestic workers. Grihalakshmi scheme is a programme to provide Rs 2,000 to such girls. Who gave Kumaraswamy the right to talk about girls? KPCC women's state president Pushpa Amarnath said this at a press conference.