For the best experience, open
https://m.justkannada.in
on your mobile browser.

ವಿಶ್ವ ಆರೋಗ್ಯ ದಿನ: ಜೆಎಸ್ಎಸ್ ವೆೃದ್ಯಕೀಯ ಮಹಾವಿದ್ಯಾಲಯದಲ್ಲಿ  ಆರೋಗ್ಯ ಶಿಬಿರ.

11:12 AM Apr 17, 2024 IST | prashanth
ವಿಶ್ವ ಆರೋಗ್ಯ ದಿನ  ಜೆಎಸ್ಎಸ್ ವೆೃದ್ಯಕೀಯ ಮಹಾವಿದ್ಯಾಲಯದಲ್ಲಿ  ಆರೋಗ್ಯ ಶಿಬಿರ

ಮೈಸೂರು,ಏಪ್ರಿಲ್,17,2024 (www.justkannada.in): ಜೆಎಸ್ಎಸ್ ವೆೃದ್ಯಕೀಯ ಮಹಾವಿದ್ಯಾಲಯ ಆರೋಗ್ಯ ಶಿಬಿರದೊಂದಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸಿತು

ಸಮುದಾಯ ವೈದ್ಯಶಾಸ್ತ್ರ ವಿಭಾಗ, ಜೆಎಸ್ಎಸ್ ವೆೃದ್ಯಕೀಯ ಮಹಾವಿದ್ಯಾಲಯ ಮೈಸೂರು, ಏಪ್ರಿಲ್ 16, 2024 ರಂದು ತನ್ನ ವಿದ್ಯಾರ್ಥಿ ನಿಲಯದ ಕೆಲಸಗಾರರಿಗೆ ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಯಿತು.

ಆರೋಗ್ಯ ಶಿಬಿರದಲ್ಲಿ ಸಮಗ್ರ ಆರೋಗ್ಯ ತಪಾಸಣೆ ಜೊತೆಗೆ ದೇಹದ ಕೊಬ್ಬಿನ ವಿಶ್ಲೇಷಣೆ, ಹಿಮೋಗ್ಲೋಬಿನ್, ರಕ್ತದಲ್ಲಿ ಸಕ್ಕರೆ ಅಂಶ ಮತ್ತು ಇಸಿಜಿ ಪರೀಕ್ಷೆಗಳನ್ನು ಮಾಡಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಆರೋಗ್ಯ ಶಿಕ್ಷಣ ಮತ್ತು ಆರೋಗ್ಯ ಸಮಾಲೋಚನೆಗಳನ್ನು ನೀಡಲಾಯಿತು.

ಡಾ.ಪ್ರವೀಣ್ ಕುಲಕರ್ಣಿ ಉಪ ಪ್ರಾಂಶುಪಾಲರು (ಪ್ಯಾರಾ ಕ್ಲಿನಿಕಲ್) ಮತ್ತು ಆಡಳಿತಾಧಿಕಾರಿ  ಎಸ್.ಆರ್.ಸತೀಶ್ ಚಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶ್ವ ಆರೋಗ್ಯ ದಿನದ ಘೋಷ ವಾಕ್ಯ “ನನ್ನ ಆರೋಗ್ಯ, ನನ್ನ ಹಕ್ಕು” ಇದರ ಮಹತ್ವದ ಬಗ್ಗೆ ತಿಳಿಸಿದರು.

ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ ಸುನೀಲ್ ಕುಮಾರ್ ಡಿ, ಸಹಾಯಕ ಪ್ರಾಧ್ಯಾಪಕರಾದ ಡಾ ಶ್ವೇತಾಶ್ರೀ ಎಂ, ಸೀನಿಯರ್ ರೆಸಿಡೆಂಟ್ ಡಾ ಶ್ವೇತಾ ಎನ್ ಕುರ್ಕುರಿ, ಇತರೆ ಸಿಬ್ಬಂದಿಗಳು, ಸ್ನಾತಕೋತ್ತರ ಪದವೀಧರರು, ಗೃಹ ವೈದ್ಯರು ಸುಮಾರು 123 ವಿದ್ಯಾರ್ಥಿ ನಿಲಯದ ಕೆಲಸಗಾರರ ಆರೋಗ್ಯ ತಪಾಸಣೆಯನ್ನು ನಡೆಸಿದರು.

ಜೆಎಸ್ಎಸ್ಎಂಸಿ ವಿದ್ಯಾರ್ಥಿ ನಿಲಯದ ಮುಖ್ಯ ವಾರ್ಡನ್ ಡಾ ಅನಿಲ್ ಎಸ್ ಬಿಳಿಮಲೆ ಮತ್ತು ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾದರು.

Health Camp, JSS Medical College, mysore

Tags :

.