For the best experience, open
https://m.justkannada.in
on your mobile browser.

ಹೃದಯವಂತರು ಬಂದಿರುವುದರಿಂದ ಹೃದಯ ಇಲ್ಲದವರು ಕಾಣೆ- ಆರ್.ಅಶೋಕ್ ವ್ಯಂಗ್ಯ.

03:33 PM Apr 13, 2024 IST | prashanth
ಹೃದಯವಂತರು ಬಂದಿರುವುದರಿಂದ ಹೃದಯ ಇಲ್ಲದವರು ಕಾಣೆ  ಆರ್ ಅಶೋಕ್ ವ್ಯಂಗ್ಯ

ಬೆಂಗಳೂರು, ಏಪ್ರಿಲ್ 13,2024 (www.justkannada.in):  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಹೃದಯವಂತ ಡಾ. ಸಿಎನ್ ಮಂಜುನಾಥ್ ಬಂದಿದ್ದಾರೆ. ಹೀಗಾಗಿ ಹೃದಯ ಇಲ್ಲದ ಡಿಕೆ ಸುರೇಶ್ ಕಾಣೆಯಾಗುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಹೃದಯವಂತರು ಬಂದಿರುವುದರಿಂದ ಹೃದಯ ಇಲ್ಲದ ಕಟುಕರು ಕಾಣೆಯಾಗುತ್ತಾರೆ. ಕಾಂಗ್ರೆಸ್ ನವರು ಮೋದಿ ಅವರನ್ನು ಹಿಟ್ಲರ್, ಮುಸೋಲಿನಿ‌ ಅಂತ ಟೀಕಿಸುತ್ತಾರೆ. ಭಾರತದ ನೈಜ ಹಿಟ್ಲರ್​ ಅಂದ್ರೆ ಅದು ಕಾಂಗ್ರೆಸ್ ಪಕ್ಷ. ಯಾವ ಕಾರಣಕ್ಕೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು?   ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿಯವರು ಈ ದೇಶದ ರಿಯಲ್ ಹೀರೋ. ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುವ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಮೋದಿ ಅವರನ್ನು ಸರ್ವಾಧಿಕಾರಿ ಅಂದಿದ್ದನ್ನು ನಾವು ಖಂಡಿಸುತ್ತೇವೆ ಎಂದು ಅಶೋಕ್ ಹೇಳಿದರು.

Key words: hearty, heartless, R. Ashok

Tags :

.