For the best experience, open
https://m.justkannada.in
on your mobile browser.

ಮೈಸೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಧರೆಗುರುಳಿದ ಮರಗಳು: ವಾಹನಗಳ ಜಖಂ

05:27 PM May 03, 2024 IST | prashanth
ಮೈಸೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ  ಧರೆಗುರುಳಿದ ಮರಗಳು  ವಾಹನಗಳ ಜಖಂ

ಮೈಸೂರು,ಮೇ,3,2024 (www.justkannada.in):  ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೀಗ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಮರಗಳು ಧರೆಗುರುಳಿವೆ. ಮೈಸೂರಿನಲ್ಲಿ ಬಿಸಿಲಿನ ತಾಪಕ್ಕೆ ಮಳೆರಾಯ ತಂಪೆರೆದಿದ್ದಾನೆ.

ಮೈಸೂರಿನಲ್ಲಿ ಹಲವೆಡೆ ಗುಡುಗ,  ಬಿರುಗಾಳಿ ಸಹಿತ ಮಳೆಯಾಗಿದ್ದು  ಬಿರುಗಾಳಿ ರಭಸಕ್ಕೆ ಮರ,ರಂಬೆ ಕೊಂಬೆಗಳು ದರೆಗುರುಳಿವೆ.  ನಗರದ ಕಾಳಿದಾಸ ರಸ್ತೆಯಲ್ಲಿ ಕಾರುಗಳ ಮೇಲೆ ಮರದ ರಂಬೆಗಳು ಬಿದ್ದು ಹತ್ತಾರು ಕಾರುಗಳು ಜಖಂ ಆಗಿವೆ. ಭಾರಿ ಮಳೆ ಬಿರುಗಾಳಿಯಿಂದಾಗಿ ನಗರದ ಹಲವೆಡೆ ನೂರಾರು ಮರಗಳು ಧರೆಗುರುಳಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಮೈಸೂರಿಗರು ಇದೀಗ ಮಳೆರಾಯನ ಆಗಮನಕ್ಕೆ ಸಂತಸಗೊಂಡಿದ್ದಾರೆ. ಮಳೆಯಾದ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Key words: Heavy rains - storm - Mysore

Tags :

.