For the best experience, open
https://m.justkannada.in
on your mobile browser.

ಕೇರಳದ ನ್ಯಾ. ಹೇಮಾ ಸಮಿತಿಯಂತೆ ಸ್ಯಾಂಡಲ್ ವುಡ್ ನಲ್ಲೂ ತನಿಖೆಗೆ ಸಮಿತಿ ರಚಿಸಿ- ಸಿಎಂಗೆ FIRE ಆಗ್ರಹ

05:07 PM Sep 04, 2024 IST | prashanth
ಕೇರಳದ ನ್ಯಾ  ಹೇಮಾ ಸಮಿತಿಯಂತೆ ಸ್ಯಾಂಡಲ್ ವುಡ್ ನಲ್ಲೂ ತನಿಖೆಗೆ ಸಮಿತಿ ರಚಿಸಿ  ಸಿಎಂಗೆ fire ಆಗ್ರಹ

ಬೆಂಗಳೂರು, ಸೆಪ್ಟಂಬರ್, 4,2024 (www.justkannada.in): ಸ್ಯಾಂಡಲ್​ವುಡ್​ನಲ್ಲಿ ಈ ಹಿಂದೆ ಕೆಲವು ನಟಿಯರು ಮೀಟೂ ಆರೋಪ ಕೇಳಿ ಬಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಮಧ್ಯೆ ಈಗ ಮಲಯಾಳಂ ಚಿತ್ರರಂಗದಲ್ಲಿ 'ಹೇಮಾ ಸಮಿತಿ ವರದಿ' ಸಲ್ಲಿಕೆಯಾದ ಬೆನ್ನಲ್ಲೆ  ಕನ್ನಡ ಚಿತ್ರರಂಗದಲ್ಲೂ ಕೇರಳದ ಮಾದರಿ ತ ತನಿಖೆ ಆಗಬೇಕು  ಎಂದು ಸಿಎಂ ಸಿದ್ದರಾಮಯ್ಯಗೆ FIRE(ಫಿಲ್ಮ್​ ಇಂಡಸ್ಟ್ರೀ ಫಾರ್​ ರೈಟ್ಸ್​ ಆಯಂಡ್​ ಇಕ್ವಾಲಿಟಿ) ಕಮಿಟಿ ಪತ್ರ ಬರೆದು ಆಗ್ರಹಿಸಿದೆ ಎನ್ನಲಾಗಿದೆ.

ಕೇರಳದನ್ಯಾ. ಹೇಮಾಸಮಿತಿಯಂತೆಸ್ಯಾಂಡಲ್ವುಡ್ನಲ್ಲೂಕಮಿಟಿರಚಿಸಿಎಂದುಸಿಎಂಸಿದ್ದರಾಮಯ್ಯಗೆ FIRE ಕಮಿಟಿಆಗ್ರಹಿಸಿದೆ. ಹೇಮಾ ಕಮಿಟಿ ರಿಪೋರ್ಟ್  ಪ್ರಕಟ ಆದ ಬಳಿಕ ತೆಲುಗು, ಕನ್ನಡ ಮುಂತಾದ ಚಿತ್ರರಂಗದಲ್ಲೂ ತನಿಖೆಗೆ ಒತ್ತಾಯ ಕೇಳಿಬಂದಿದೆ. ಫೈರ್​ (ಫಿಲ್ಮ್​ ಇಂಡಸ್ಟ್ರೀ ಫಾರ್​ ರೈಟ್ಸ್​ ಆಯಂಡ್​ ಇಕ್ವಾಲಿಡಿ) ಸಂಸ್ಥೆಯ ಮೂಲಕ 153 ಜನರು ಕನ್ನಡ ಚಿತ್ರರಂಗದಲ್ಲಿಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ನಟರು, ನಟಿಯರು, ಸಾಹಿತಿಗಳು, ಪತ್ರಕರ್ತರು, ನಿರ್ದೇಶಕರು, ನಿರ್ಮಾಪಕರು ಹಾಗೂ ವಿವಿಧ ವಿಭಾಗಗಳ ತಂತ್ರಜ್ಞರು ಸೇರಿದಂತೆ ಒಟ್ಟು 153 ಜನರು ಸಹಿ ಮಾಡಿದ್ದಾರೆ ಎನ್ನಲಾಗಿದೆ.

ಲೈಂಗಿಕ ಹಿಂಸೆಯ ಸಮಸ್ಯೆಗಳೂ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಫೈರ್​ ಸಂಸ್ಥೆ ಮನವಿ ಮಾಡಿದೆ. ವರದಿಯನ್ನು 3 ತಿಂಗಳ ಒಳಗೆ ಪೂರ್ಣಗೊಳಿಸಬೇಕು ಮತ್ತು ವರದಿಯ ವಿವರನ್ನು ಶೀಘ್ರವೇ ಸಾರ್ವಜನಿಕಗೊಳಿಸಬೇಕು ಎಂದು ಫೈರ್​ ಸಂಸ್ಥೆ ಆಗ್ರಹಿಸಿದೆ.

Key words: Hema committee, investigate, sandalwood,  FIRE ,  CM

Tags :

.