For the best experience, open
https://m.justkannada.in
on your mobile browser.

ಐದು ವರ್ಷನೋ ಎರಡು ವರ್ಷನೋ ಹೈಕಮಾಂಡ್ ತೀರ್ಮಾನ- ಶಾಸಕ ಲಕ್ಷ್ಮಣ್ ಸವದಿ.

11:26 AM Jan 17, 2024 IST | prashanth
ಐದು ವರ್ಷನೋ ಎರಡು ವರ್ಷನೋ ಹೈಕಮಾಂಡ್ ತೀರ್ಮಾನ  ಶಾಸಕ ಲಕ್ಷ್ಮಣ್ ಸವದಿ

ಕಲಬುರ್ಗಿ,ಜನವರಿ,17,2024(www.justkannada.in): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂಬ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಶಾಸಮ ಲಕ್ಷ್ಮಣ್ ಸವದಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ,  ಇದು ಯತೀಂದ್ರ ಅವರ ವೈಯಕ್ತಿಕ ಅಭಿಪ್ರಾಯ.  ಹೈಕಮಾಂಡ್ ಮನಸ್ಸು ಮಾಡಿದ್ರೂ ಎರಡೇ ವರ್ಷ ಸಿಎಂ ಆಗಬಹುದು ಅಥವಾ  5 ವರ್ಷ ಸಿಎಂ ಆಗಬುಹುದು.  ಐದು ವರ್ಷನೋ 2 ವರ್ಷನೋ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ನಂದ್ ಕುಮಾರ್ ಹೆಗಡೆ ಅವರು ಏಕವಚನ ಪ್ರಯೋಗ ವಿಚಾರ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಣ್ ಸವದಿ, ಈ ರೀತಿ ಹೇಳಿಕೆಗಳಿಂದ ಅವರ ಬೆಲೆ ಕಡಿಮೆಯಾಗುತ್ತದೆ. ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ 5 ವರ್ಷ ನಾಪತ್ತೆಯಾಗಿದ್ದರು. ಕ್ಷೇತ್ರದ ಜನರನ್ನು ಸಂಸದ ಅನಂತ್ ಕುಮಾರ್ ಹೆಗಡೆ ಭೇಟಿಯಾಗಿಲ್ಲ. ಈಗ ಟಿಕೆಟ್ ಪಡೆಯಲು ಹೆಗಡೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿಯ ಹೇಳಿಕೆಗಳಿಂದ ಅವರ ಬೆಲೆ ಕಡಿಮೆಯಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಕೂಡ ಅವರಿಗೆ ಇಲ್ಲ ಎಂದು ಟಾಂಗ್ ನೀಡಿದರು.

Key words: High command-decision - five years - two years – MLA- Lakshman Savadi.

Tags :

.