ದೆಹಲಿಗೆ ಬರುವಂತೆ 28 ಸಚಿವರಿಗೆ ಹೈಕಮಾಂಡ್ ಬುಲಾವ್.
12:27 PM Jan 09, 2024 IST
|
prashanth
ಬೆಂಗಳೂರು,ಜನವರಿ,9,2024(www.justkannada.in) : ನವದೆಹಲಿಗೆ ಬರುವಂತೆ ಹೈಕಮಾಂಡ್ 28 ಸಚಿವರಿಗೆ ಬುಲಾವ್ ನೀಡಿದ್ದಯ ಜನವರಿ 11 ರಂದು ಎಲ್ಲಾ ಸಚಿವರೂ ದೆಹಲಿಗೆ ತೆರಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜನವರಿ 11 ರಂದು ಎಲ್ಲಾ ಸಚಿವರು ದೆಹಲಿಗೆ ತೆರಳಿ ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. ಸಭೆಯಲ್ಲಿ ಲೋಕಸಭೆ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗುತ್ತದೆ. ಸಚಿವರಿಗೆ ವರಿಷ್ಠರು ಸಲಹೆ ಸೂಚನೆಯನ್ನ ನೀಡಲಿದ್ದಾರೆ ಎಂದರು.
ಲೋಕಸಭೆ ಚುನಾವಣೆ ಕಾಂಗ್ರೆಸ್ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಕೊಡುತ್ತೇವೆ. ವರಿಷ್ಠರು ಅಭ್ಯರ್ಥಿಗಳನ್ನ ಆಯ್ಕೆ ಮಾಡುತ್ತಾರೆ. ಯಾವಾಗ ಪಟ್ಟಿ ರಿಲೀಸ್ ಆಗುತ್ತೆ ಗೊತ್ತಿಲ್ಲ. ಎಂದು ಪರಮೇಶ್ವರ್ ತಿಳಿಸಿದರು.
Key words: High Command -ordered -28 ministers - come – Delhi-G.Parameshwar
Next Article