For the best experience, open
https://m.justkannada.in
on your mobile browser.

ಬಿಜೆಪಿ ಶಾಸಕ ಪೂಂಜಗೆ ಹೈಕೋರ್ಟ್‌ ತರಾಟೆ : ಭಯೋತ್ಪಾದಕನ ಬಂಧನ ವಿರೋಧಿಸಿ ಠಾಣೆಗೆ ಹೋಗಲು ಸಾಧ್ಯವೆ..?

11:05 AM Jun 01, 2024 IST | mahesh
ಬಿಜೆಪಿ ಶಾಸಕ ಪೂಂಜಗೆ ಹೈಕೋರ್ಟ್‌ ತರಾಟೆ   ಭಯೋತ್ಪಾದಕನ ಬಂಧನ ವಿರೋಧಿಸಿ ಠಾಣೆಗೆ ಹೋಗಲು ಸಾಧ್ಯವೆ
ನ್ಯಾ.ಡಾ.ಕೃಷ್ಣ ಎನ್.ದೀಕ್ಷಿತ್.‌ ಚಿತ್ರಕೃಪೆ : ಇಂಟರ್‌ ನೆಟ್

"When the police arrested the terrorist, his wife came; My husband is a good man. Is it possible for a representative of the people to go to the police station if they are arrested by the police? The judge asked.

ಬೆಂಗಳೂರು, ಜೂನ್. 01, 2024: (www.justkannada.in news)  ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಲ್ಲದೆ, ಪೊಲೀಸರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ನಡೆಗೆ ಹೈಕೋರ್ಟ್ ತೀವ್ರ ಆಕ್ರೋಶ.

ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಮಾಡಿದ ಆರೋಪಿ ಬಂಧನ ಖಂಡಿಸಿ ಶಾಸಕ ಪೂಂಜ ಈ ವರ್ತನೆ ತೋರಿದ್ದರು. ಈವೇಳೆ ಶಾಸಕರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದರು.

ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಪ್ರಶ್ನಿಸಿ ಬಿಜೆಪಿ ಶಾಸಕ ಹರೀಶ್ ಪೂಂಜ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ'ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣಎಸ್.ದೀಕ್ಷಿತ್ ವಿಚಾರಣೆ ನಡೆಸಿದರು.

ಈ ವೇಳೆ.  ಅರ್ಜಿದಾರರ ಪರ ವಕೀಲರ ವಿವರಣೆ ಆಲಿಸಿದ ಬಳಿಕ, ಪೂಂಜ ವರ್ತನೆಯನ್ನು ಕಠಿಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ದೀಕ್ಷಿತ್, 'ಜನಪ್ರತಿನಿಧಿ ಎಂದ ಮಾತ್ರಕ್ಕೆ ಪೊಲೀಸ್ ಠಾಣೆಗೆ ಹೋಗಿ ಪ್ರತಿಭಟನೆ ನಡೆಸುವುದು ಎಷ್ಟು ಸರಿ?, ಶಾಸಕರ ಜಾಗ ಏನಿದ್ದರೂ ವಿಧಾನಸೌಧ. ಅವರು ಅಲ್ಲಿ ಕುಳಿತು ಶಾಸನ ರೂಪಸಲಿ. ಅದು ಬಿಟ್ಟು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅವರೆಲ್ಲಾ ನಿರ್ಭಯದಿಂದ, ಒತ್ತಡರಹಿತವಾಗಿ ತನಿಖೆ ಮಾಡಲು ಹೇಗೆ ಸಾಧ್ಯ' ಎಂದು ಕಿಡಿ ಕಾರಿದರು.

'ಪೊಲೀಸರು ಭಯೋತ್ಪಾದಕನನ್ನು ಬಂಧಿಸಿದಾಗ, ಅವನ ಪತ್ನಿ ಬಂದು; ನನ್ನ ಪತಿ ಭಾಳಾ ಒಳ್ಳೆಯ ವ್ಯಕ್ತಿ. ಪೊಲೀಸರು ಬಂಧಿಸಿದ್ದಾರೆ ಎಂದರೆ ಜನಪ್ರತಿನಿಧಿ ಪೊಲೀಸ್‌ ಠಾಣೆಗೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಯವರು, 'ಇತ್ತೀಚಿನ ದಿನಗಳಲ್ಲಿ ಪೊಲೀಸರ ವಿರುದ್ಧ ಧರಣಿ ನಡೆಸುವುದು, ಕಲ್ಲು ಎಸೆಯುವುದು, ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸಾಮಾನ್ಯವಾಗಿ ಹೋಗಿದೆ. ಯಾವುದೋ ಒಂದು ಪ್ರಕರಣದಲ್ಲಿ ಪೊಲೀಸರಿಂದ ಒಬ್ಬರಿಗೆ ತೊಂದರೆ ಆಗಬಹುದು. ಹಾಗೆಂದ ಮಾತ್ರಕ್ಕೆ ಶಾಸಕರು ಕೋರ್ಟ್ ಮಾಡುವ ಕೆಲಸವನ್ನು ಮಾಡಿದರೆ ಹೇಗೆ? ಶಾಸಕರು ಠಾಣೆಗೆ ಹೋಗಬಾರದಿತ್ತು' ಎಂದು ಅಸಮಾಧಾನ ವ್ಯಕ್ತಪಡಿಸಿದರು.

key words: High court, pulls up, BJP MLA Poonja, asks him, if he can go to, police station, against, arrest of terrorist.?

SUMMARY: 

ನ್ಯಾ.ಡಾ.ಕೃಷ್ಣ ಎನ್.ದೀಕ್ಷಿತ್.‌
ಚಿತ್ರಕೃಪೆ : ಇಂಟರ್‌ ನೆಟ್

The High Court has come down heavily on BJP MLA from Belthangady, Harish Poonja, for staging a protest in front of the police station and abusing the police.

MLA Poonja made the remarks in protest against the arrest of the accused for illegal mining and illegal storage of explosives. The police had lodged a complaint against the MLA.

Bjp MLA Harish Poonja had filed a petition in the court challenging the FIR registered against him by the police. The petition was heard by Justice Krishna S Dixit, who was part of a special bench hearing criminal cases against MLAs and MPs.

Tags :

.