For the best experience, open
https://m.justkannada.in
on your mobile browser.

ಕರ್ನಾಟಕದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಗೆದ್ದವರ್ಯಾರು, ಬಿದ್ದವರು ಯಾರು..?

12:45 PM Jun 04, 2024 IST | mahesh
ಕರ್ನಾಟಕದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಗೆದ್ದವರ್ಯಾರು  ಬಿದ್ದವರು ಯಾರು

ಬೆಂಗಳೂರು, ಜೂ.04,2024: ಕರ್ನಾಟಕದ ಲೋಕಸಭಾ ಚುನಾವಣೆಯ ಪೈಕಿ ಹೈವೋಲ್ಟೇಜ್ ಕ್ಷೇತ್ರಗಳ ಅಭ್ಯರ್ಥಿಗಳ ಪರ್ಮಾರ್ಮೆನ್ಸ್‌ ಹೀಗಿದೆ..

ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಜೆಡಿಎಸ್‌ , ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಖುದ್ದು ಮಂಡ್ಯದಿಂದ ಸ್ಪರ್ಧಿಸಿದ್ದರೆ, ಸಹೋದರನ ಪುತ್ರ, ಪೆನ್‌ ಡ್ರೈವ್‌ ಅಪಖ್ಯಾತಿಯ ಪ್ರಜ್ವಲ್‌ ರೇವಣ್ಣ ಹಾಸನದಲ್ಲಿ ಅದೃಷ್ಠ ಪರೀಕ್ಷೆಗೆ ಇಳಿದಿದ್ದರು. ಕೋಲಾರದಲ್ಲಿ ಮಲ್ಲೇಶ್‌ ಬಾಬುಗೆ ಟಿಕೆಟ್‌ ನೀಡಲಾಗಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಡಾ, ಮಂಜುನಾಥ್‌, ಬಿಜೆಪಿ ಟಿಕೆಟ್‌ ನಿಂದ ಸ್ಪರ್ಧಿಸಿದ್ದರು.

ಈ ಹಿನ್ನೆಲೆಯಲ್ಲಿ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಮಂಡ್ಯ ಕ್ಷೇತ್ರಗಳು ಈ ಬಾರಿ ಭಾರೀ ಸದ್ದು ಮಾಡಿದ್ದ ಹೈ ಪ್ರೊಫೈಲ್ ಕ್ಷೇತ್ರಗಳು.

ಇದೇ ಮೊದಲ ಬಾರಿ ಮೈಸೂರು ರಾಜವಂಶಸ್ಥ ಯದುವೀರ್ ಕಣದಲ್ಲಿದ್ದರು. ಹಾಲಿ ಸಂಸದ ಪ್ರತಾಪ್‌ ಸಿಂಹಗೆ ಟಿಕೆಟ್‌ ತಪ್ಪಿಸಿ ಯದುವೀರ್‌ ಗೆ ಪಕ್ಷ ಮಣೆ ಹಾಕಿತ್ತು. ಆದ್ದರಿಂದ ಇದು ಸಹ ದೇಶದ ಗಮನ ಸೆಳೆದಿತ್ತು.

ಒಕ್ಕಲಿಗ ಭದ್ರಕೋಟೆ ಮಂಡ್ಯದಲ್ಲಿ ಜೆಡಿಎಸ್ ನಿಂದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ , ಕಾಂಗ್ರೆಸ್ ನ ಸ್ಟಾರ್ ಚಂದ್ರು ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದ್ದು, ಗೆಲುವಿನ ಘೋಷಣೆ ಬಾಕಿ ಉಳಿದಿದೆ.

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಿಂದ ಪುನರಾಯ್ಕೆ ಬಯಿಸಿ ಸ್ಪರ್ಧಿಸಿದ್ದು, ಮತದಾನಕ್ಕೂ ಕೆಲ ದಿನಗಳ ಮೊದಲು ಪ್ರಜ್ವಲ್ ಗೆ ಸೇರಿದ್ದು ಎನ್ನಲಾದ ಪೆನ್‌ ಡ್ರೈವ್‌ ವಿಡಿಯೋ ವೈರಲ್ ಆಗಿದ್ದವು. ಪ್ರಜ್ವಲ್ ವಿರುದ್ದ ಮಾಜಿ ಸಂಸದ ದಿವಂಗತ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಕಾಂಗ್ರೆಸ್‌ ಅಭ್ಯರ್ಥಿ. ಪ್ರಜ್ವಲ್‌ ಸೋಲುವ ಹಾದಿಯಲ್ಲಿದ್ದು, ಶ್ರೇಯಸ್ಸೇ ಹಾಸನದ ಪಟೇಲ್ ಆಗಿ ಹೊರ ಹೊಮ್ಮಿದ್ದಾರೆ.

 ಮೈಸೂರು ರಾಜಮನೆತನದ ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಎಂಟ್ರಿ ಪಡೆದಿದ್ದು, ಕಾಂಗ್ರೆಸ್‌ ನ ʼ ಆಮ್‌ ಆದ್ಮಿ ʼ ಎಂ ಲಕ್ಷ್ಮಣ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಿರಿಯ ಸಹೋದರ ಹಾಗೂ ಹಾಲಿ ಸಂಸದ ಡಿ.ಕೆ.ಸುರೇಶ್ ಅವರು ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಳಿಯ, ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರ ವಿರುದ್ಧ ಸೋಲನುಭವಿಸಿದ್ದಾರೆ. ಊಹೆಗೂ ಮೀರಿದ ಅಂತರದಲ್ಲಿ ಮಂಜುನಾಥ್‌ ಗೆಲುವಿನ ನಗೆ ಬೀರಿದ್ದಾರೆ.

key words:  Who won,  and who fell, in the high voltage constituencies, of Karnataka?

SUMMARY: 

Yaduveer Krishnadatta Chamaraja Wadiyar, the scion of the Mysore royal family, entered politics as a BJP candidate and defeated Aam Aadmi, M Lakshmana of the Congress.

KPCC president DK Shivakumar's younger brother and sitting MP DK Suresh lost to BJP candidate and former Prime Minister H D Deve Gowda's son-in-law and noted cardiologist Dr CN Manjunath. Manjunath won by an unexpected margin

.