HomeBreaking NewsLatest NewsPoliticsSportsCrimeCinema

ಹಿಮದ್‌ ಗೋಪಾಲಸ್ವಾಮಿ ಬೆಟ್ಟ :  ಬಸ್ ಸಂಚಾರ ನಿಷೇಧಿಸಿದ್ದ ತಹಸೀಲ್ದಾರ್‌ ಆದೇಶ ಹಿಂದಕ್ಕೆ

09:36 AM Feb 17, 2024 IST | mahesh

 

ಚಾಮರಾಜನಗರ, ಫೆ.೧೭, ೨೦೨೪ : ಜಿಲ್ಲೆಯ ಗುಂಡ್ಲುಪೇಟೆ ಸಮೀಪದ  ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮಧ್ಯಾಹ್ನ 3 ಗಂಟೆ ನಂತರ ಬಸ್ ಸಂಚಾರ ನಿಷೇಧಿಸಿ ಹೊರಡಿಸಿದ ಆದೇಶ ಹಿಂಪಡೆಯಲಾಗಿದೆ.

ತಹಸೀಲ್ದಾರ್ ಟಿ.ರಮೇಶ್ ಬಾಬು ಅವರು ಈ ಸಂಬಂಧ ಹೊರಡಿಸಿದ್ದ ಆದೇಶವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಸೂಚನೆ ಮೇರೆಗೆ ‌ಒಂದೇ‌‌ ದಿನಕ್ಕೆ ಹಿಂಪಡೆದಿದ್ದಾರೆ.

ಘಟನೆ ಹಿನ್ನೆಲೆ :

ವಿವಿಧ ಕಾರಣ ನೀಡಿ ತಾಲ್ಲೂಕು ಆಡಳಿತ ಹಾಗೂ ತಹಸೀಲ್ದಾರ್ ಟಿ.ರಮೇಶ್ ಬಾಬು ಗೋಪಾಲಸ್ವಾಮಿ ಬೆಟ್ಟಕ್ಕೆ ಮಧ್ಯಾಹ್ನ 3 ಗಂಟೆ ನಂತರ ಬಸ್ ಸಂಚಾರ ನಿಷೇಧಿಸಿ ಆದೇಶಿಸಿದ್ದರು. ಇದಕ್ಕೆ  ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ಕನ್ನೇಗಾಲ ಗ್ರಾಮಸ್ಥರು ಸ್ವತಃ ತಹಸೀಲ್ದಾರ್ ಬಳಿ ಆದೇಶ ಹಿಂಪಡೆಯುವಂತೆ ಲಿಖಿತ ಮನವಿ ಸಲ್ಲಿಸಿದ್ದರು.  ತಹಸೀಲ್ದಾರ್ ಟಿ.ರಮೇಶ್ ಬಾಬು , ಹಿರಿಯ ಅಧಿಕಾರಿಗಳ ಜತೆ ಸೂಕ್ತ ಸಮಾಲೋಚನೆ ನಡೆಸದೆ ಈ ಆದೇಶ ಹೊರಡಿಸಿದ್ದರು. ಈ  ಆದೇಶದ ವಿರುದ್ದ ವ್ಯಾಪಕ ಪ್ರತಿರೋಧ ವ್ಯಕ್ತವಾಗಿತ್ತು.

ಇದೀಗ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಈ ಹಿಂದೆ ಇದ್ದ ನಿಯಮದಂತೆ 4 ಗಂಟೆಯವರೆಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟು ಹೊಸ ಆದೇಶ ಹಿಂಪಡೆಯಲಾಗಿದೆ. ಜತೆಗೆ ಅರಣ್ಯ ಇಲಾಖೆಯಿಂದ ಹೆಚ್ಚುವರಿ ಸಿಬ್ಬಂದಿ ನೇಮಿಸಿ ದೇವಾಲಯಕ್ಕೆ ಪ್ರಸಾದ ಸೇವಿಸಲು ನಿತ್ಯ ಬರುವ ಕಾಡಾನೆ ಮೇಲೆ ನಿಗಾವಹಿಸುವಂತೆ ಸೂಚಿಸಲಾಗಿದೆ.

ಸ್ಪಷ್ಟನೆ : 

ತಹಸೀಲ್ದಾರ್ ಟಿ.ರಮೇಶ್ ಬಾಬು ಅವರು ಹಿಮದ್‌ ಗೋಪಲಾಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ  ಸಂಬಂಧಿಸಿದಂತೆ ಹೊರಡಿಸಿದ್ದ ಆದೇಶ ಹಿಂದಕ್ಕೆ ಪಡೆದಿರುವ ಬಗ್ಗೆ ಚಾ.ನಗರ  ಜಿಲ್ಲಾಧಿಕಾರಿ ಶಿಲ್ಪನಾಗ್‌ ಅವರು ʼ ಜಸ್ಟ್‌ ಕನ್ನಡ ʼಗೆ ಸ್ಪಷ್ಟಪಡಿಸಿದ್ದಾರೆ.

Key words : himadgopalaswambetta ̲ gundlupet ̲ chamarajanagara ̲ bus ̲ transport ̲ restriction ̲ withdrawan ̲ dc ̲ shilpanag

 

Tags :
himadgopalaswambetta ̲ gundlupet ̲ chamarajanagara ̲ bus ̲ transport ̲ restriction ̲ withdrawan ̲ dc ̲ shilpanag
Next Article