ಮೋದಿ ಪ್ರಧಾನಿಯಾದ ಮೇಲೆ ಹಿಂದೂಗಳಿಗೆ ಏನು ಲಾಭ ಆಗಿಲ್ಲ- ಸಚಿವ ಸಂತೋಷ್ ಲಾಡ್.
11:22 AM Jan 06, 2024 IST
|
prashanth
ಬೆಂಗಳೂರು,ಜನವರಿ,6,2024(www.justkannada.in): 10 ವರ್ಷಗಳಲ್ಲಿ ಹಿಂದೂಗಳಿಗೆ ಏನಾದರೂ ಲಾಭ ಆಗಿದೆಯಾ..? ಮೋದಿ ಪ್ರಧಾನಿಯಾದ ಮೇಲೆ ಹಿಂದೂಗಳಿಗೆ ಏನು ಲಾಭ ಆಗಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ನಾನು ಹಿಂದೂ ನೀವು ಹಿಂದೂ ಏನಾದ್ರೂ ಲಾಭ ಆಗದೆಯಾ..? ಏನಾದರೂ ವಿಶೇಷ ಲಾಭ ಆಗಿದೆಯಾ...? ಇದರಿಂದ ಬಿಜೆಪಿಯವರಿಗಷ್ಟೇ ಲಾಭ. ಮೋದಿ ಪ್ರಧಾನಿಯಾದ ಮೇಲೆ ಹಿಂದೂಗಳಿಗೆ ಏನು ಲಾಭ ಇಲ್ಲ. ಶ್ರೀಕಾಂತ್ ಪೂಜಾರಿ ವಿರುದ್ದ ಕೇಸ್ ಹಾಕಿದ್ರೆ ನಮಗೇನು ಲಾಭ. ಅಷ್ಟು ಕೇಸ್ ಆಗಿದೆ ಇನ್ನೊಂದು ಬಾರಿ ಕೋರ್ಟ್ ಹೋದ್ರೆ ಏನಾಗುತ್ತೆ ಎಂದು ಬಿಜೆಪಿ ಪ್ರತಿಭಟನೆಗೆ ಕಿಡಿಕಾರಿದರು.
ಬಿಜೆಪಿಗರು ಮೋದಿ ವಿಶ್ವಗುರು ಅಂತಾರೆ. ಮೋದಿಯವರಿಗೆ ಇಷ್ಟು ಪ್ರಚಾರ ಬೇಕಾ..? ನೀರಲ್ಲಿ ಹೋದರೂ ಕ್ಯಾಮರಾ ನವಿಲು ಜೊತೆ ಹೋದರೂ ಫೋಟೊ ಎಂದು ಸಂತೋಷ್ ಲಾಡ್ ವ್ಯಂಗ್ಯವಾಡಿದರು.
Key words: Hindus -not benefited -since -Modi -became -PM – Minister- Santosh Lad.
Next Article