ಹೊಸ ವರ್ಷದಂದು ಇಸ್ರೊ ಮತ್ತೊಂದು ಐತಿಹಾಸಿಕ ಸಾಧನೆ: ಎಕ್ಸ್ ಪೋಸ್ಯಾಟ್ ಉಪಗ್ರಹ ಉಡಾವಣೆ.
ಬೆಂಗಳೂರು,ಜನವರಿ,1,2024(www.justkannada.in): ಹೊಸ ವರ್ಷದಂದು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಈ ವರ್ಷದ ಮೊದಲ ಉಪಗ್ರಹ ಉಡಾವಣೆಯನ್ನು ಯಶಸ್ವಿಯಾಗಿ ಮಾಡಿದೆ.
ಪಿಎಸ್‌ಎಲ್‌ವಿ ಸಿ58 (PSLV-C58) ರಾಕೆಟ್ ಮೂಲಕ ಎಕ್ಸ್ ಪೋಸ್ಯಾಟ್ ಉಪಗ್ರಹವನ್ನು ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ 9.10ಕ್ಕೆ 'ಎಕ್ಸ್ ಪೊಸ್ಯಾಟ್' ಸೇರಿದಂತೆ ವಿದ್ಯಾಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಸಂಬಂಧಿಸಿದ ಇನ್ನು 10 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ವಾಹಕವು ಗಗನಕ್ಕೆ ಚಿಮ್ಮಿದೆ.
ಇದು ಕಪ್ಪುಕುಳಿಗಳ ಅಧ್ಯಯನ ಮಾಡಲಿದೆ. ಈ ಮೂಲಕ ಇಸ್ರೋ ಈ ವರ್ಷ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಮೊದಲ ಹೆಜ್ಜೆ ಇಟ್ಟಿದೆ. ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ವಿಶೇಷ ಖಗೋಳ ವೀಕ್ಷಣಾಲಯವನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ವಿಶ್ವದ ಎರಡನೇ ದೇಶ ಭಾರತವಾಗಿದೆ. ಎಕ್ಸ್‌ಪೋಸ್ಯಾಟ್ ಸಂಶೋಧನೆಗಾಗಿ ಒಂದು ರೀತಿಯ ವೀಕ್ಷಣಾಲಯವಾಗಿದೆ, ಇದು ಬಾಹ್ಯಾಕಾಶದಿಂದ ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತದೆ.
2023 ರಲ್ಲಿ ಚಂದ್ರಯಾನ -3 ಯೋಜನೆ ಮೂಲಕ ಚಂದ್ರನನ್ನು ತಲುಪಿದ ಬಳಿಕ ಮತ್ತು ಆದಿತ್ಯ ಎಲ್ -1 ಮಿಷನ್ ಮೂಲಕ ಸೂರ್ಯನೆಡೆಗೆ ಪ್ರಯಾಣವನ್ನು ಪ್ರಾರಂಭಿಸಿದ ನಂತರ ಇದೀಗ ಈ ಉಪಗ್ರಹವನ್ನ ಉಡಾವಣೆ ಮಾಡಿದೆ.
Key words: historic achievement - ISRO - new year- launch - X-Posat -satellite