HomeBreaking NewsLatest NewsPoliticsSportsCrimeCinema

ಸತತ ಚುನಾವಣೆಯಲ್ಲಿ ಸ್ಪರ್ಧಿಸಲು ಸೋಮಣ್ಣ ಎಷ್ಟು ಲೂಟಿ ಮಾಡಿರಬೇಕು:  ಸಿಎಂ ಸಿದ್ದರಾಮಯ್ಯ

02:01 PM Apr 15, 2024 IST | mahesh

ತುಮಕೂರು, ಏ.15, 2024  : (www.justkannada.in news) ವರುಣಾ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಪಾಠ ಕಲಿಸಿದಂತೆ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ಈ ಬಾರಿ ಚುನಾವಣೆಯಲ್ಲಿ  ಬಾಗಿಲು ಬಂದ್‌ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಮತದಾರರಿಗೆ ಕರೆ ನೀಡಿದರು.

50 ರಿಂದ 60 ಕೋಟಿ ರೂ.  ಖರ್ಚು ಮಾಡಿದರೂ ನನ್ನ ವಿರುದ್ಧ 48,000 ಮತಗಳ ಅಂತರದಿಂದ ವರುಣಾ ಕ್ಷೇತ್ರದಲ್ಲಿ ಸೋತರು, ಅದೇ ರೀತಿ 50 ಕೋಟಿ ರೂ. ಖರ್ಚು ಮಾಡಿದರೂ ಪುಟ್ಟರಂಗ ಶೆಟ್ಟಿ ವಿರುದ್ಧ 12 ಸಾವಿರ ಮತಗಳ ಅಂತರದಿಂದ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋತರು.

"ಹತ್ತು ತಿಂಗಳ ಅವಧಿಯಲ್ಲಿ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಂದ್ರೆ ಅರ್ಥ ಮಾಡಿಕೊಳ್ಳಿ  ಅವರು ಎಷ್ಟು ಹಣವನ್ನು ಲೂಟಿ ಮಾಡಿದ್ದಾರೆ ಎಂದು ಊಹಿಸಿ. ಅವರು ರಾಜ್ಯವನ್ನು ಲೂಟಿ ಮಾಡಿದ ಹಿಂದಿನ ಬಿಜೆಪಿ ಸರ್ಕಾರದ ಭಾಗವಾಗಿದ್ದರು" ಎಂದು ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ವಸತಿ ಸಚಿವರಾಗಿದ್ದ ಸೋಮಣ್ಣ ಅವರು ಬಡವರಿಗೆ ಮನೆ ವಿತರಿಸಲು ಸಾಧ್ಯವಾಗಿಲ್ಲ.  2014-2019ರ ಅವಧಿಯಲ್ಲಿ ಸಂಸತ್ತಿನಲ್ಲಿ ಮಾಡಿದಂತೆ ತುಮಕೂರಿನ ಹಾಗೂ ರಾಜ್ಯದ ಧ್ವನಿಯಾಗಬಲ್ಲ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ಎಬಿಪಿ-ಸಿವೋಟರ್ ಒಪಿನಿಯನ್ ಪೋಲ್: ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಬಿಜೆಪಿಗೆ ಲೋಕಸಭೆ ಪ್ರಾಬಲ್ಯ..!

ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಭರವಸೆ ನೀಡಿದಂತೆ ಯಾವುದೇ ಆಶ್ವಾಸನೆಗಳನ್ನು ಜನರಿಗೆ ಈಡೇರಿಸಲಿಲ್ಲ ಎಂದು ಅವರು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೃಪೆ : ದಿ ಇಂಡಿಯನ್‌ ಎಕ್ಸ್‌ ಪ್ರೆಸ್‌

key words : how-much, Somana, looted, to-contest-polls, consecutively, cm, Siddaramaiah

 

ENGLISH SUMMARY :

Chief Minister Siddaramaiah on Sunday gave a call to voters of Tumakuru Lok Sabha seat to show the door to BJP candidate V Somanna as was done in Varuna and Chamarajanagar assembly constituencies.

“He lost against me by a margin of 48,000 votes despite spending Rs 50 crore to Rs 60 crore and against Putta Ranga Shetty by a 12,000-vote margin even after spending Rs 50 crore."

Tags :
CMconsecutivelyHow muchlootedSiddaramaiahSomanato-contest-polls
Next Article