HomeBreaking NewsLatest NewsPoliticsSportsCrimeCinema

ನನ್ನನ್ನು ಬಂಧಿಸಲು ನೂರು ಸಿದ್ಧರಾಮಯ್ಯ ಬರಬೇಕು- ಕೇಂದ್ರ ಸಚಿವ ಹೆಚ್.ಡಿಕೆ ಟಾಂಗ್

04:16 PM Aug 21, 2024 IST | prashanth

ಬೆಂಗಳೂರು, ಆಗಸ್ಟ್​ 21,2024 (www.justkannada.in): ಗತ್ಯವಿದ್ದರೇ ಪರಿಸ್ಥಿತಿ ಬಂದರೇ ಮುಲಾಜಿಲ್ಲದೆ ಹೆಚ್.ಡಿ ಕುಮಾರಸ್ವಾಮಿಯನ್ನೂ ಬಂಧಿಸುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು .  ಯಾವ ಸಿಎಂ ಕೂಡ ಇಂತಹ ಭಂಡತನವನ್ನು ಪ್ರದರ್ಶಿಸಿರಲಿಲ್ಲ ಎಂದು ಟಾಂಗ್ ಕೊಟ್ಟರು.

ಹೆಚ್​ ಡಿಕೆಗೆ ಭಯ ಶುರುವಾಗಿದೆ ಎಂಬ ಸಿಎಂ  ಸಿದ್ದರಾಮಯ್ಯ ಹೇಳಿಕೆ  ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ನನಗೆ ಭಯ ಶುರುವಾಗಿದೆಯಾ, ನನ್ನ ನೋಡಿದ್ರೆ ಹಾಗೆ ಅನಿಸುತ್ತಾ? ಭಯ ಶುರುವಾಗಿರೋದು ಅವರಿಗೆ. ಕಳೆದ ವಾರದಿಂದ ಮುಖ್ಯಮಂತ್ರಿ ಹೇಗೆ ನಡೆದುಕೊಂಡಿದ್ದಾರೆ ನೋಡಿದ್ದೀರಲ್ವಾ? ಇವರು ಏನು ಮಾಡಿದ್ದಾರೆ ಎಂದು ಜನರು ನೋಡಿದ್ದಾರೆ. ಮುಡಾ ಆಸ್ತಿಯನ್ನ ನನ್ನ ಆಸ್ತಿ ಅಂತ ಹೇಳುತ್ತಿದ್ದಾರೆ ಎಂದು  ಕಿಡಿಕಾರಿದರು.

 

Key words: Hundred, Siddaramaiah, arrest, Union Minister, HDK

 

Tags :
arrestHDKhundredSiddaramaiahUnion minister
Next Article