ಹೆಚ್.ಡಿಕೆ ಯಾರಿಗೆ ಕಾಲ್ ಮಾಡಿದ್ದಾರೆ, ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂಬುದು ಗೊತ್ತಿದೆ-ಡಿಸಿಎಂ ಡಿಕೆ ಶಿವಕುಮಾರ್.
06:00 PM Feb 19, 2024 IST
|
prashanth
ಬೆಂಗಳೂರು, ಫೆಬ್ರವರಿ,19,2024(www.justkannada.in): ರಾಜ್ಯಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ 5ನೇ ಅಭ್ಯರ್ಥಿಯನ್ನಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಗೆ ಅಡ್ಡ ಮತದಾನದ ಭೀತಿ ಎದುರಾಗಿದೆ.
ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಹೆಚ್.ಡಿ ಕುಮಾರಸ್ವಾಮಿ ಯಾರಿಗೆ ಕಾಲ್ ಮಾಡುತ್ತಿದ್ದಾರೆ. ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ. ಕುಮಾರಸ್ವಾಮಿ ಏನೇನೂ ಹೇಳಿದ್ದಾರೆ ಎಂಬುದು ನನಗೆ ಗೊತ್ತಿದೆ. ನನಗೆ ಎಲ್ಲರೂ ಹೇಳುತ್ತಿದ್ದಾರೆ. ಬಿಜೆಪಿ ಸ್ಟ್ರಾಟಜಿ ಏನು ಎಂದು ಎಲ್ಲವೂ ಗೊತ್ತಾಗಿದೆ ಎಂದರು.
ಅಡ್ಡ ಮತದಾನ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಸುಮ್ಮನೆ ಅರ್ಜಿ ಹಾಕ್ತಾರಾ..? ಏನೇನು ನಡೆಯುತ್ತಿದೆ ಅನ್ನೋದು ನಮಗೆಲ್ಲವೂ ಗೊತ್ತಿದೆ. ಫೆಬ್ರವರಿ 27 ಕ್ಕೆ ನೋಡೋಣ ಎಂದು ಹೇಳಿದರು.
Key words: I know - HDK - called -threatened – DCM-DK Shivakumar.
Next Article