HomeBreaking NewsLatest NewsPoliticsSportsCrimeCinema

ಲೀಲಾವತಿಯವರನ್ನು ಆಸ್ಪತ್ರೆಗೆ ಸೇರಿಸಿದಲ್ಲಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

08:26 PM Dec 03, 2023 IST | thinkbigh
featuredImage featuredImage

ನೆಲಮಂಗಲ, ಡಿಸೆಂಬರ್ 12, 2023 (www.justkannada.in): ಹಿರಿಯ ಕಲಾವಿದೆ ಲೀಲಾವತಿಯವರನ್ನು ಆಸ್ಪತ್ರೆಗೆ ಸೇರಿಸಿದಲ್ಲಿ  ಅವರ  ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು  ಮುಖ್ಯಮಂತ್ರಿ  ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು  ಸೋಲದೇವನಹಳ್ಳಿ ಯಲ್ಲಿ ಇರುವ ಕನ್ನಡ ಚಲನಚಿತ್ರ  ಹಿರಿಯ ನಟಿ  ಲೀಲಾವತಿ ಅವರ  ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಲೀಲಾವತಿ ಯವರು ಚೆನ್ನಾಗಿದ್ದ ಸಂದರ್ಭದಲ್ಲಿ ಜಮೀನು ವಿಚಾರವಾಗಿ ಇದ್ದ ತೊಂದರೆ ಬಗೆಹರಿಸಲು ಭೇಟಿಯಾಗುತ್ತಿದ್ದರು. ಈಗ ವಯೋಸಹಜವಾಗಿ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದಾರೆ. ಆಸ್ಪತ್ರೆಗೆ ಸೇರಿಸಿದರೆ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದೇನೆ ಎಂದರು.

ಲೀಲಾವತಿ ಯವರು ಒಬ್ಬ ನೈಜ ಪ್ರತಿಭೆಯಿದ್ದ ಕಲಾವಿದೆ. ಅವರ ಮಗ ವಿನೋದ್ ರಾಜ್ ಕೂಡ ಚೆನ್ನಾಗಿ ನೋಡಿಕೊಳ್ಳಲಿ ಎಂದು ಹೇಳಿದ್ದೇನೆ. ಸರ್ಕಾರದಿಂದ ಏನೇ ಸಹಾಯದ ಅಗತ್ಯವಿದ್ದರು ಒದಗಿಸುವುದಾಗಿ ತಿಳಿಸಿದ್ದೇನೆ ಎಂದರು.

ರೈತರ ಪರವಾಗಿ ಲೀಲಾವತಿ ಗಟ್ಟಿಯಾದ ನಿಲುವು ಹೊಂದಿದ್ದರು. ಈಗಾಲೂ ಅವರಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತೇವೆ ಎಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದರು.

Tags :
Actor LeelavathiActor Leelavati Chief Minister SiddaramaiahChief Minister SiddaramaiahIf Leelavati is admitted to the hospitalthe government will bear the medical expenses: Chief Minister Siddaramaiah