For the best experience, open
https://m.justkannada.in
on your mobile browser.

ಜು.15 ರಂದು ‘ನಮ್ ಕಂಪನಿ’  ರೈತ ಉತ್ಪಾದಕ ಸಂಸ್ಥೆಗಳ ಸಬಲೀಕರಣ ಕುರಿತು ಬಾನುಲಿ ಸರಣಿ ಉದ್ಘಾಟನೆ

11:46 AM Jul 13, 2024 IST | prashanth
ಜು 15 ರಂದು ‘ನಮ್ ಕಂಪನಿ’  ರೈತ ಉತ್ಪಾದಕ ಸಂಸ್ಥೆಗಳ ಸಬಲೀಕರಣ ಕುರಿತು ಬಾನುಲಿ ಸರಣಿ ಉದ್ಘಾಟನೆ

ಮೈಸೂರು,ಜುಲೈ, 13,2024 (www.justkannada.in):  ಮೈಸೂರು ಆಕಾಶವಾಣಿ, ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (CFTRI),  ಮೈಸೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ, ಮತ್ತು ವಿಕಸನ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ "ನಮ್ ಕಂಪನಿ" ರೈತ ಉತ್ಪಾದಕ ಸಂಸ್ಥೆಗಳ ಸಬಲೀಕರಣ ಕುರಿತು ಬಾನುಲಿ ಸರಣಿ ಉದ್ಘಾಟನಾ ಸಮಾರಂಭವನ್ನ ಜುಲೈ 15 ರಂದು ಆಯೋಜನೆ ಮಾಡಲಾಗಿದೆ.

ಜುಲೈ 15 ಬೆಳಗ್ಗೆ 10.30ಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಬಿ.ಎನ್. ಬಹದ್ದೂರ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (CFTRI) ನಿರ್ದೇಶಕರಾದ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರು 'ನಮ್ ಕಂಪನಿ' ಬಾನುಲಿ ಸರಣಿಯನ್ನ ಉದ್ಘಾಟನೆ ನೆರವೇರಿಸಲಿದ್ದಾರೆ.

ಮೈಸೂರು ವಿವಿಯ ಕುಲಪತಿ ಪ್ರೊ. ಎನ್. ಕೆ. ಲೋಕನಾಥ್ ಅವರು ನಮ್ ಕಂಪನಿ ಬಾನುಲಿ ಸರಣಿಯ ವೇಳಾಪಟ್ಟಿ ಬಿಡುಗಡೆ  ಮಾಡಲಿದ್ದಾರೆ. ಕೊಡಗು ವಿಶ್ವವಿದ್ಯಾನಿಲಯ ಕುಲಪತಿ ಡಾ. ಅಶೋಕ್ ಆಲೂರು ಅವರು  ಆಶಯ ಭಾಷಣ  ಮಾಡಲಿದ್ದಾರೆ.

ಮೈಸೂರು ಆಕಾಶವಾಣಿ, ಉಪ ನಿರ್ದೇಶಕರ (ಕಾರ್ಯಕ್ರಮ) ಉಮೇಶ್ ಎಸ್. ಎಸ್ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ  ಮಂಡ್ಯ ಜಿಲ್ಲೆಯ ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ, ಹರ್ಷಿತಾ ಬಿ.ವಿ, ಕೊಯಮತ್ತೂರಿನ  ಪಿ.ವಿ.ಆರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್  ಸಿಇಒ ಸುಭದ್ರ,  ಮಂಡ್ಯ ವಿಕಸನ ಸಂಸ್ಥೆ, ಗೌರವ ಅಧ್ಯಕ್ಷರಾದ ಪ್ರೊ. ಆರ್. ಎಲ್ ಜಗದೀಶ್,  ಬೆಂಗಳೂರು ಗ್ರೀನ್ ಅಬ್ಜೆಕ್ಟ್ ಆಗ್ರೋ ಇಂಡಿಯಾ, ವ್ಯವಸ್ಥಾಪಕ ನಿರ್ದೇಶಕರಾದ ಪುಷ್ಪಾದೇವಿ  ಸಿಟಿ ಯೂನಿಯನ್ ಬ್ಯಾಂಕ್, ಮೈಸೂರು  ವ್ಯವಸ್ಥಾಪಕರಾದ ಕುಮಾರ್ ಆಗಮಿಸಲಿದ್ದಾರೆ.

Key words: Inauguration, Banuli Series, Num Company, June 15, mysore

Tags :

.