HomeBreaking NewsLatest NewsPoliticsSportsCrimeCinema

ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾವೇಶ ಉದ್ಘಾಟನೆ: ನಿರೀಕ್ಷಿತ ಮಟ್ಟದಲ್ಲಿ ಬಾರದ ಜನ

02:20 PM Aug 10, 2024 IST | prashanth

ಮೈಸೂರು,ಆಗಸ್ಟ್,10,2024 (www.justkannada.in): ಮುಡಾ ಹಗರಣದ ವಿರುದ್ದ ಬಿಜೆಪಿ, ಜೆಡಿಎಸ್  ನಡೆಸಿದ ಪಾದಯಾತ್ರೆ ಮುಕ್ತಾಯವಾಗಿದ್ದು ಇಂದು ಮೈಸೂರಿನಲ್ಲಿ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾವೇಶ ನಡೆಯುತ್ತಿದೆ.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾವೇಶಕ್ಕೆ  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ.

ಸಮಾವೇಶದಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಿಖಿಲ್ ಕುಮಾರಸ್ವಾಮಿ, ಜಿಟಿ ದೇವೇಗೌಡ ಸೇರಿದಂತೆ ಮೈತ್ರಿ ನಾಯಕರು ಭಾಗಿಯಾಗಿದ್ದಾರೆ.

ನಿರೀಕ್ಷಿತ ಮಟ್ಟದಲ್ಲಿ ಬಾರದ ಜನ

ಮಳೆಯಿಂದಾಗಿ ಸಮಾವೇಶಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗಮಿಸಿಲ್ಲ ಎನ್ನಲಾಗಿದೆ. ಸಮಾವೇಶದಲ್ಲಿ ಖಾಲಿ ಕುರ್ಚಿಗಳ ಪ್ರದರ್ಶನ ಕಂಡು ಬಂದಿದ್ದು,  ಮುಂಭಾಗದಲ್ಲಿರುವ ಕುರ್ಚಿಗಳಲ್ಲಿ  ಮಾತ್ರ ಕೂತ ಜನಕುಳಿತಿದ್ದಾರೆ. ನಿನ್ನೆಯ ಸಮಾವೇಶಕ್ಕೆ ಹೋಲಿಸಿದರೆ ದೊಸ್ತಿಗಳ ಸಮಾವೇಶಕ್ಕೆ ಕಡಿಮೆ ಜನ ಆಗಮಿಸಿದ್ದಾರೆ.

Key words: Inauguration, Mysore Chalo Padayatra, bjp, jds, mysore

Tags :
BJPinaugurationJDSMysore Chalo PadayatraMysore.
Next Article