For the best experience, open
https://m.justkannada.in
on your mobile browser.

ಸೆ.21ಕ್ಕೆ ಪತ್ರಿಕಾ ದಿನಾಚರಣೆ ಉದ್ಘಾಟನೆ: ಹಿರಿಯ ಪತ್ರಕರ್ತರಿಗೆ ಅಭಿನಂದನೆ, ವಾರ್ಷಿಕ ಪ್ರಶಸ್ತಿ ಪ್ರದಾನ

05:14 PM Sep 17, 2024 IST | prashanth
ಸೆ 21ಕ್ಕೆ ಪತ್ರಿಕಾ ದಿನಾಚರಣೆ ಉದ್ಘಾಟನೆ  ಹಿರಿಯ ಪತ್ರಕರ್ತರಿಗೆ ಅಭಿನಂದನೆ  ವಾರ್ಷಿಕ ಪ್ರಶಸ್ತಿ ಪ್ರದಾನ

ಮೈಸೂರು,ಸೆಪ್ಟಂಬರ್,17,2024 (www.justkannada.in):  ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸೆಪ್ಟಂಬರ್ 21ಕ್ಕೆ (ಶನಿವಾರ) ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಅಭಿನಂದನೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ನಡೆಯಲಿದ್ದು ಸಮಾರಂಭವನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.

ಮೈಸೂರು ನಗರದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಹಿರಿಯ ಪತ್ರಕರ್ತರಿಗೆ ಅಭಿನಂದನೆ  ಸಲ್ಲಿಸಲಿದ್ದಾರೆ. ವಾರ್ಷಿಕ ಪ್ರಶಸ್ತಿಗಳನ್ನು ಗ್ಯಾರಂಟಿ ಯೋಜನೆಗಳ ಅನುಷ್ಢಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಪ್ರದಾನ ಮಾಡಲಿದ್ದಾರೆ.

ಪ್ರಜಾವಾಣಿ ದಿನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಐನಕೈ ಅವರು ಪ್ರಧಾನ ಭಾಷಣ ಮಾಡಲಿದ್ದು ಶಾಸಕ ಕೆ. ಹರೀಶ್ ಗೌಡ, ಡಿ. ರವಿಶಂಕರ್, ನ್ಯೂಸ್ ಫಸ್ಟ್ ಕನ್ನಡ  ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ  ಎಸ್. ರವಿಕುಮಾರ್, ಜಿಎಸ್ಎಸ್ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ದೀಪಕ್ ವಹಿಸಲಿದ್ದಾರೆ.

ಅಭಿನಂದಿತರು ಮತ್ತು ಪ್ರಶಸ್ತಿ ವಿಜೇತರು :

ಈ ಸಾಲಿನ ಹಿರಿಯ ನಗರ ಪತ್ರಕರ್ತರಾಗಿ ದಿನತಂತಿ ಪತ್ರಿಕೆಯ ಹಿರಿಯ ವರದಿಗಾರ ಎಂ.ಎನ್. ಕಿರಣ್ ಕುಮಾರ್, ಗ್ರಾಮಾಂತರ ಹಿರಿಯ ಪತ್ರಕರ್ತರಾದ ಪ್ರಜಾವಾಣಿ ದಿನಪತ್ರಿಕೆಯ ಯಶವಂತ ಸಾಲಿಗ್ರಾಮ,  ಹಿರಿಯ ಸುದ್ಧಿ ಸಂಪಾದಕರಾ ಕೆ.ಎನ್. ನಾಗಸುಂದ್ರಪ್ಪ ( ವರ್ತಮಾನ ದಿನಪತ್ರಿಕೆ ),  ಹಿರಿಯ ಛಾಯಾಗ್ರಾಹಕರಾದ ಶ್ರೀರಾಮ್ (ದಿ. ಹಿಂದು ದಿನಪತ್ರಿಕೆ), ದೃಶ್ಯ ಮಾಧ್ಯಮದಿಂದ ಮಹೇಶ್ ಶ್ರವಣ ಬೆಳಗೋಳ (ಈ ಟಿವಿ ಭಾರತ್ ಹಿರಿಯ ವರದಿಗಾರ ) ದೃಶ್ಯ ಮಾಧ್ಯಮ ಹಿರಿಯ ವಿಡಿಯೋಗ್ರಫರ್ ನಾಗೇಶ್. ಎಸ್ (ವಿಸ್ತಾರ ಟಿವಿ ) ಅವರನ್ನು ಇದೇ ವೇಳೆ ಅಭಿನಂದಿಸಲಾಗುವುದು.

ಇನ್ನು ಈ ಸಾಲಿನ ಉತ್ತಮ ಕನ್ನಡ ವರದಿಗೆ ಹೆಚ್.ಎಸ್ ಸಚೀತ್ (ಪ್ರಜಾವಾಣಿ ಪತ್ರಿಕೆ) ಇಂಗ್ಲೀಷ್ ವರದಿಗೆ  ಶಿಲ್ಪಾ.ಪಿ (ಹಿರಿಯ ಪ್ರಧಾನ ವರದಿಗಾರ, ಡೆಕ್ಕನ್ ಹೆರಾಲ್ಡ್) ಉತ್ತಮ ಫೋಟೋಗ್ರ್ರಾಫಿಗೆ ಉದಯ್ ಶಂಕರ್.ಎಸ್ (ಇಂಡಿಯನ್ ಎಕ್ಸ್‌ ಪ್ರೆಸ್ಸ್ ಪತ್ರಿಕೆ) ವಿದ್ಯುನ್ಮಾನ ಮಾಧ್ಯಮದ ವರದಿ ಪ್ರಶಸ್ತಿಗಳಿಗೆ ಜಯಂತ್ ಮತ್ತು ರಾಮು‌ (ದೂರದರ್ಶನ) ಅಯ್ಕೆಯಾಗಿದ್ದಾರೆ. ಇವರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದು ಸಂಘದ ಎಲ್ಲ ಸದಸ್ಯರು ಭಾಗವಹಿಸಬೇಕಾಗಿ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮನವಿ ಮಾಡಿದ್ದಾರೆ.

Key words: Inauguration, Press Day, CM Siddaramaiah, myore

Tags :

.